Advertisement

ಗಾಂಧಿ, ನೆಹರು ಕುಟುಂಬಿಕರ ಹೆಸರಿಡುವಾಗ ಕನ್ನಡದವರ ನೆನಪಾಗಲಿಲ್ಲವೇ? ಪ್ರತಾಪ್ ಸಿಂಹ ವಾಗ್ದಾಳಿ

03:21 PM May 28, 2020 | keerthan |

ಮೈಸೂರು: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಡಲು ಪ್ರತಿ ಪಕ್ಷಗಳ ವಿರೋಧ ಕೇಳಿಬಂದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಇಂದಿರಾ ಕ್ಯಾಂಟೀನ್ ಹೆಸರಿಡುವಾಗ ಕನಕ ಕ್ಯಾಂಟಿನ್ ನೆನಪಾಗಲಿಲ್ಲವಾ? ನಾಗರಹೊಳೆ, ಬಂಡೀಪುರ ಉದ್ಯಾನವನಕ್ಕೆ ಗಾಂಧಿ, ನೆಹರು ಕುಟುಂಬಿಕರ ಹೆಸರಿಡುವಾಗ ಕನ್ನಡದವರ ನೆನಪಾಗಲಿಲ್ವ? ಈಗ ಮಾತ್ರ ಅವರಿಗೆ ಕನ್ನಡದವರ ನೆನಪು ಬಂದಿದಿಯೇ ಎಂದು ಪ್ರಶ್ನಿಸಿದ್ದಾರೆ.

Advertisement

ಮೈಸೂರಿನಲ್ಲಿ ಮಾತನಾಡಿದ ಅವರು, ವೀರ ಸಾವರ್ಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅಂತಹವರ ಹೆಸರಿಡಲು ಇವರು ಯಾಕೆ ವಿರೋಧ ಮಾಡುತ್ತಾರೋ ಗೊತ್ತಿಲ್ಲ. ಅಂಡಮಾನ್ ನಿಕೋಬಾರ್ ಜೈಲಿನಲ್ಲಿ ವೀರ ಸಾವರ್ಕರ್ ಇದ್ದ ಜೈಲು ನೋಡಿ ಬರಲಿ ಎಂದಿದ್ದಾರೆ.

ವಿರೋಧ ಪಕ್ಷಗಳು ಇಂತಹ ಕ್ಷುಲಕ ರಾಜಕಾರಣ ಬಿಡಬೇಕು. ಜನರು ಬುದ್ದಿವಂತರಾಗಿದ್ದಾರೆ. ಕಾಂಗ್ರೆಸ್ ಈಗಲೂ ದಡ್ಡತನ ಪ್ರದರ್ಶನ ಮಾಡುತ್ತಿದೆ. ಕಾಂಗ್ರೆಸ್ ಈಗಲಾದರೂ ಎಚ್ಚೆತ್ತುಕೊಂಡು ರಚನಾತ್ಮಕವಾಗಿ ರಾಜಕೀಯ ಮಾಡಲಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next