ನವದೆಹಲಿ: ‘ನಮ್ಮ ಸಂವಿಧಾನದಲ್ಲಿ ಭಾರತದ್ದೇನೂ ಇಲ್ಲ’ ಎಂಬ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉಲ್ಲೇಖಿಸಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಸಂಸತ್ತಿನಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ ಬಿಜೆಪಿ, 1980 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬರೆದ ಪತ್ರವನ್ನು ಹಂಚಿಕೊಂಡು, ಅದರಲ್ಲಿ ಅವರು ಸಾವರ್ಕರ್ ಅವರನ್ನು “ಭಾರತದ ಅಸಾಮಾನ್ಯ ಪುತ್ರ” ಎಂದು ಉಲ್ಲೇಖಿಸಿದ್ದಾರೆ’ ಎಂದು ಹೇಳಿತು.
ಸಾವರ್ಕರ್ ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡಿದ್ದರು ಎಂದು ಇಂದಿರಾ ಗಾಂಧಿ ಹೇಳಿದ್ದರು. ಮಹಾತ್ಮ ಗಾಂಧೀಜಿ ಜೈಲಿಗೆ ಹೋದರು, ನೆಹರೂ ಜಿ ಜೈಲಿಗೆ ಹೋದರು ಆದರೆ ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆಯಾಚಿಸಿದರು,” ಎಂದು ರಾಹುಲ್ ಹೇಳಿದರು.
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಇಂದಿರಾಗಾಂಧಿ ಅವರು ಬರೆದಿರುವ ಪತ್ರವನ್ನು ಹಂಚಿಕೊಂಡು, ‘ರಾಹುಲ್ ಅವರ ಟೀಕೆಗಳು ಸರಿಯಲ್ಲ. ವೀರ್ ಸಾವರ್ಕರ್, ಇಂದಿರಾ ಗಾಂಧಿ ಬಗ್ಗೆ ಲೋಕಸಭೆಯಲ್ಲಿ ತಪ್ಪು ಹೇಳಿಕೆ ನೀಡಿದ ಕುರಿತು ದಾಖಲೆ ಇದು’ ಎಂದರು.
ಸಂವಿಧಾನದ ಸುತ್ತ ಕೇಂದ್ರೀಕೃತವಾದ ಚರ್ಚೆ ವೇಳೆ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು, ಬಿಜೆಪಿ ಸಂವಿಧಾನದ ಮೇಲೆ 24×7 ದಾಳಿ ನಡೆಸುತ್ತಿದೆ. ನಾವು ಸಂವಿಧಾನವನ್ನು ಅನುಸರಿಸುತ್ತೇವೆ. ಬಿಜೆಪಿಯ ಪುಸ್ತಕ ಮನುಸ್ಮೃತಿ. ನೀವು ಸಂವಿಧಾನದಿಂದ ರಕ್ಷಿಸಲ್ಪಟ್ಟಿದ್ದೀರಿ ಎಂದು ನಾವು ಪ್ರತಿಯೊಬ್ಬ ಬಡವರಿಗೆ ಹೇಳಲು ಬಯಸುತ್ತೇವೆ” ಎಂದು ರಾಹುಲ್ ಕಿಡಿ ಕಾರಿದರು.