Advertisement

ಮೀಸಲು ತೀರ್ಪಿಗೆ ರಾಜಕೀಯ ಪಕ್ಷಗಳ ಸ್ವಾಗತ; ಐತಿಹಾಸಿಕ ತೀರ್ಪು ಎಂದ ಬಿಜೆಪಿ

12:31 AM Nov 08, 2022 | Team Udayavani |

ಹೊಸದಿಲ್ಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್‌) ಶೇ.10 ಮೀಸಲಾತಿಯನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್‌ ನೀಡಿರುವ ಐತಿಹಾಸಿಕ ತೀರ್ಪನ್ನು ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ಸ್ವಾಗತಿಸಿವೆ.

Advertisement

ವಿಶೇಷವಾಗಿ ಈ ತೀರ್ಪು ಕೇಂದ್ರ ಸರಕಾರಕ್ಕೆ ದೊಡ್ಡ ಮಟ್ಟಿನ ಜಯ ತಂದುಕೊಟ್ಟಿದೆ. 2019ರ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಿರುವಾಗ ಈ ಮೀಸಲಾತಿಯನ್ನು ಸರಕಾರ ಘೋಷಿಸಿತ್ತು. ಈಗ ಗುಜರಾತ್‌, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಸುಪ್ರೀಂ ಕೋರ್ಟ್‌ “ಇಡಬ್ಲ್ಯುಎಸ್‌’ ಮೀಸಲಾತಿ ಯನ್ನು ಅಂಗೀಕರಿಸಿರುವುದು ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಈ ತೀರ್ಪು “ದೇಶದ ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿಗೆ ಸಂದ ಜಯ’ ಎಂದು ಬಿಜೆಪಿ ಬಣ್ಣಿಸಿದೆ.

ತೀರ್ಪಿನ ಬಗ್ಗೆ ಶ್ಲಾಘಿಸಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, “ಪಟ್ಟಭದ್ರ ಹಿತಾಸಕ್ತಿ ಯೊಂದಿಗೆ ದುರುದ್ದೇಶದ ಮೂಲಕ ದೇಶದ ನಾಗರಿಕರ ನಡುವೆ ಅಸಮಾನತೆಯ ಬೀಜ ಬಿತ್ತಲು ಯತ್ನಿಸಿದ ರಾಜಕೀಯ ಪಕ್ಷಗಳಿಗೆ ಈ ತೀರ್ಪು ಕಪಾಳಮೋಕ್ಷ ಮಾಡಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ.10 ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ಸಿಕ್ಕಿರುವುದು ಆ ವರ್ಗಕ್ಕೆ ಅವಕಾಶಗಳ ಬಾಗಿಲನ್ನು ತೆರೆಯಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳು, ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಅವರಿಗೆ ಪ್ರವೇಶ ಸಿಗಲಿದೆ. ಇದು ಸಾಮಾಜಿಕ ನ್ಯಾಯವನ್ನು ಮತ್ತು ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ನ ಸ್ಫೂರ್ತಿಯನ್ನು ಬಲಿಷ್ಠಗೊಳಿಸಲಿದೆ’ ಎಂದಿದ್ದಾರೆ.

ಮೀಸಲಾತಿಯ ವ್ಯಾಪ್ತಿಯಲ್ಲಿಲ್ಲದ ವರ್ಗಕ್ಕೆ ಇಡಬ್ಲ್ಯುಎಸ್‌ ಮೀಸಲಾತಿ ಒದಗಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಇದು ಗರೀಬ್‌ ಕಲ್ಯಾಣದ ಧ್ಯೇಯ ಹೊಂದಿರುವ ಪ್ರಧಾನಿ ಮೋದಿಯವರಿಗೆ ಸಂದ ಜಯ. ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿಟ್ಟ ಮಹತ್ತರ ಹೆಜ್ಜೆ ಎಂದು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದ್ದಾರೆ. ತೀರ್ಪನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಗುಜರಾತ್‌ ಮಾಜಿ ಡಿಸಿಎಂ ನಿತಿನ್‌ ಪಟೇಲ್‌ ಸೇರಿದಂತೆ ಹಲವರು ಸ್ವಾಗತಿಸಿದ್ದಾರೆ.

ಪಟೇಲರಿಂದ ಶ್ಲಾಘನೆ: ಇದೇ ವೇಳೆ ಗುಜರಾತ್‌ನಲ್ಲಿ 2015ರಲ್ಲಿ ಪಾಟೀದಾರ್‌ ಕೋಟಾ ಪ್ರತಿಭ ಟನೆಯ ನೇತೃತ್ವ ವಹಿಸಿದ್ದ ನಾಯಕರು ಕೂಡ ತೀರ್ಪ ನ್ನು ಶ್ಲಾ ಸಿದ್ದಾರೆ. ಬಿಜೆಪಿ ನಾಯಕ ಹಾರ್ದಿಕ್‌ ಪಟೇಲ್‌ ಮಾತನಾಡಿ, “ಪ್ರಧಾನಿ ಮೋದಿ ಕೈಗೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಪರಿಣಾಮವಾಗಿ, ಇನ್ನು ಮುಂದೆ 68 ಸಮುದಾಯದ ಸದಸ್ಯರು ಶಿಕ್ಷಣ ಮತ್ತು ಉದ್ಯೋ ಗ ದಲ್ಲಿ ಮೀಸಲಾತಿ ಪಡೆಯಲಿದ್ದಾರೆ. ನಮ್ಮ ಪ್ರತಿಭಟನೆಯು ಜನರಿಗೆ ಲಾಭ ತಂದುಕೊಟ್ಟಿತು ಎಂದು ಹೇಳಲು ಹೆಮ್ಮೆಯಾಗುತ್ತಿದೆ’ ಎಂದಿದ್ದಾರೆ. ಗುಜರಾತ್‌ನ ಆಮ್‌ ಆದ್ಮಿ ಪಕ್ಷದ ಅಧ್ಯಕ್ಷ ಗೋಪಾಲ್‌ ಇಟಾಲಿಯಾ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎನ್‌ಸಿಪಿ ನಾಯಕಿ ರೇಶ್ಮಾ ಪಟೇಲ್‌ ಕೂಡ, ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಇನ್ನು, ಕೇರಳದ ಐಯುಎಂಎಲ್‌ ನಾಯಕ ಪಿ.ಕೆ. ಕುಜ್ಞಾಲಿಕುಟ್ಟಿ ಅವರು ತೀರ್ಪಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶತಮಾನಗಳಿಂದ ನಡೆದುಬಂದ ತಾರತಮ್ಯದಿಂದಾಗಿಯೇ ಹಲವು ಜಾತಿಗಳು ಹಿಂದುಳಿಯುವಂತಾಯಿತು. 50 ವರ್ಷಗಳಾದರೂ ಈ ತಾರತಮ್ಯ ನಿಂತಿಲ್ಲ. ಇಂದಿನ ತೀರ್ಪು ಕಳವಳಕಾರಿಯಾಗಿದ್ದು, ಇದು ಇತರ ವರ್ಗಗಳ ಅವಕಾಶಗಳನ್ನು ಕಿತ್ತುಕೊಳ್ಳಲಿದೆ ಎಂದಿದ್ದಾರೆ. ಭಾರತವು ಸಾಮಾಜಿಕ ಅಸಮಾನತೆಯುಳ್ಳ ದೇಶ. ಆ ಅಸಮಾನತೆಯನ್ನು ಕೊನೆಗಾಣಿಸಬೇಕೆಂ ದರೆ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಸ್ಥಾನಮಾನ ಆಧರಿಸಿ ಮೀಸಲಾತಿ ನೀಡಬೇಕು. ಇಲ್ಲಿ ಸಾಮಾಜಿಕ ಸ್ಥಾನಮಾನವು ಮಾನದಂಡವಾಗಬೇಕೇ ಹೊರತು ಸಾಮಾಜಿಕ ನ್ಯಾಯವಲ್ಲ ಎಂದು ತಮಿಳುನಾಡಿನ ಪಿಎಂಕೆ ಅಧ್ಯಕ್ಷ ಡಾ|  ರಾಮದಾಸ್‌ ಅಭಿಪ್ರಾಯಪಟ್ಟಿದ್ದಾರೆ.

ಯುಪಿಎ ಅವಧಿಯಲ್ಲಾಗಿದ್ದು ಎಂದ ಕಾಂಗ್ರೆಸ್‌: ಇನ್ನೊಂದೆಡೆ ಕಾಂಗ್ರೆಸ್‌ ಕೂಡ ತೀರ್ಪನ್ನು ಸ್ವಾಗತಿಸಿದೆ. ಸಿನ್ಹೋ ಆಯೋಗವನ್ನು ನೇಮಕ ಮಾಡುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಲು ಮೊದಲು ಹೆಜ್ಜೆಯಿಟ್ಟಿದ್ದೇ 2005-06ರ ಡಾ| ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜೈರಾಂ ರಮೇಶ್‌ ಹೇಳಿದ್ದಾರೆ.

ಬಡವರೆಲ್ಲರದ್ದೂ ಒಂದೇ ಜಾತಿ. ಅವರು ಬಡವರು ಅಷ್ಟೆ. ಈ ಮೀಸಲಾತಿಯು ದೇಶದಲ್ಲಿ ಒಗ್ಗಟ್ಟು ಮೂಡಿಸಲಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಸಿಗುವಂತಾಗಬೇಕು.
-ಉಮಾಭಾರತಿ, ಬಿಜೆಪಿ ನಾಯಕಿ

ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ತೀರ್ಪಿನಿಂದ ಸಾಮಾಜಿಕ ನ್ಯಾಯಕ್ಕಾಗಿ ಶತಮಾನಗಳಿಂದ ನಡೆದ ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ.
-ಎಂ.ಕೆ.ಸ್ಟಾಲಿನ್‌, ತಮಿಳುನಾಡು ಸಿಎಂ

ಪಂಚಪೀಠದ ತೀರ್ಪು

ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠದಿಂದ 3:2ರ ಅನುಪಾತದ ತೀರ್ಪು ಹೊರಬಿದ್ದಿದೆ. ನ್ಯಾ| ದಿನೇಶ್‌ ಮಾಹೇಶ್ವರಿ, ನ್ಯಾ| ಬೇಲಾ ಎಂ ತ್ರಿವೇದಿ ಮತ್ತು ನ್ಯಾ| ಜೆ.ಬಿ.ಪರ್ದಿವಾಲ ಅವರು ಮೀಸಲಾತಿ ಪರ ತೀರ್ಪು ನೀಡಿದ್ದರೆ, ಸಿಜೆಐ ಯು.ಯು.ಲಲಿತ್‌ ಮತ್ತು ನ್ಯಾ| ರವೀಂದ್ರ ಭಟ್‌ ಮೀಸಲಾತಿಯನ್ನು ವಿರೋಧಿಸಿದ್ದಾರೆ. ತೀರ್ಪಿನ ವೇಳೆ ನ್ಯಾಯಮೂರ್ತಿಗಳು ನೀಡಿರುವ ಅಭಿಪ್ರಾಯ ಹೀಗಿತ್ತು.

ನ್ಯಾ| ದಿನೇಶ್‌ ಮಾಹೇಶ್ವರಿ
ಇಡಬ್ಲ್ಯೂ ಎಸ್‌ ಕೋಟಾವು ಸಮಾನತೆಯನ್ನು ಉಲ್ಲಂಘನೆ ಮಾಡುವುದಿಲ್ಲ ಮತ್ತು ಸಂವಿಧಾನದ ಮೂಲ ಆಶಯಕ್ಕೂ ಧಕ್ಕೆ ತರುವುದಿಲ್ಲ. ಸಂವಿಧಾನ ನೀಡಿರುವ ಮೀಸಲಾತಿಯ ಜತೆಯಲ್ಲೇ ಈ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗುತ್ತಿದೆ. ಶಿಕ್ಷಣದಲ್ಲಿ ನಿಬಂಧನೆಗಳನ್ನು ಮಾಡಲು ರಾಜ್ಯವನ್ನು ಶಕ್ತಗೊಳಿಸುವ ಮೂಲಕ ಮೂಲಭೂತ ರಚನೆಯನ್ನು ಉಲ್ಲಂಘಿ ಸಲು ಸಾಧ್ಯವಿಲ್ಲ. ಶೇ.50ರ ಮಿತಿಯ ಕಾರಣ ದಿಂದಾಗಿ ಇಡಬ್ಲ್ಯೂ ಎಸ್‌ಗಾಗಿನ ಮೀಸಲಾತಿಗಳು ಮೂಲಭೂತ ರಚನೆಯನ್ನು ಉಲ್ಲಂಘಿ ಸುವುದಿಲ್ಲ. ಏಕೆಂ ದರೆ, ಶೇ.50ರಷ್ಟನ್ನು ಮೀರಲೇಬಾರದು ಎಂದು ಹೇಳಿಲ್ಲ. ಸಮಾನ ಸಮಾಜದ ಗುರಿ ಕಡೆಗೆ ಎಲ್ಲರನ್ನೂ ಒಳಗೊಳ್ಳುವ ನಡಿಗೆಯನ್ನು ಖಚಿತಪಡಿಸಿಕೊಳ್ಳಲು ಮೀಸಲಾತಿಯು ಸಕಾರಾತ್ಮಕ ಕ್ರಮದ ಸಾಧನವಾಗಿದೆ. “ಇದು ಯಾವುದೇ ವರ್ಗ ಅಥವಾ ವಿಭಾಗವನ್ನು ಸೇರಿಸುವ ಒಂದು ಸಾಧನ ವಾಗಿದ್ದು, ಆರ್ಥಿಕ ಆಧಾರದ ಮೇಲೆ ಮೀಸಲಾತಿಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ’. ಇಡಬ್ಲ್ಯೂಎಸ್‌ ಮೀಸಲಾ ತಿಯು ಸಮಾನತೆಯ ಸಂಹಿತೆಯನ್ನು ಅಥವಾ ಸಂವಿಧಾನದ ಅಗತ್ಯ ಲಕ್ಷಣವನ್ನು ಉಲ್ಲಂಘಿಸುವುದಿಲ್ಲ. ಶೇ.50ರ ಉಲ್ಲಂಘಿಘನೆಯು ಮೂಲಭೂತ ರಚನೆಯನ್ನು ಉಲ್ಲಂಘಿಸುವುದಿಲ್ಲ. ಏಕೆಂದರೆ ಮಿತಿ 16 (4) ಮತ್ತು (5) ಕ್ಕೆ ಮಾತ್ರ ಇದೆ.

ನ್ಯಾ| ಬೇಲಾ ಎಂ.ತ್ರಿವೇದಿ
ಪ್ರತ್ಯೇಕ ವಿಭಾಗವೊಂದನ್ನು ಮಾಡಿ ಮೀಸಲಾತಿ ನೀಡುತ್ತಿರುವುದು ಸಮರ್ಥನೀಯವಾಗಿದೆ. ಶಾಸಕಾಂಗಕ್ಕೆ ಜನರ ಅಗತ್ಯತೆಗಳು ಗೊತ್ತು. ಹಾಗೆಯೇ ಮೀಸಲಾತಿಯಿಂದ ಆರ್ಥಿಕವಾಗಿ ಹಿಂದುಳಿದವರನ್ನು ಹೊರಗಿಟ್ಟಿದ್ದು ಸರಕಾರಕ್ಕೆ ತಿಳಿದಿದೆ. ಭಾರತದಲ್ಲಿ ಪುರಾತನದಿಂದಲೂ ಬಂದಿರುವ ಜಾತಿ ಪದ್ಧತಿಯಿಂದಾಗಿ ಮೀಸಲಾತಿಯನ್ನು ಕಾಣ ಬೇಕಾಯಿತು. ಆರಂಭದಲ್ಲಿ ಎಸ್‌ಸಿ-ಎಸ್‌ಟಿ ಜನಾಂಗದವರಿಗೆ ನೀಡಲಾಯಿತು. ಈಗಾಗಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಮುಗಿಯುತ್ತಾ ಬಂದಿದೆ. ಈ ಸಂದರ್ಭದಲ್ಲಿ ಸಮಾಜದ ಬಹುದೊಡ್ಡ ಹಿತಾಸಕ್ತಿಗಾಗಿ ಮೀಸಲಾತಿ ಕುರಿತಂತೆ ಪುನರ್‌ ಪರಿಶೀಲನೆ ಮಾಡುವ ಅಗತ್ಯವಿದೆ. ಹಾಗೆಯೇ ಮೀಸಲಾತಿಗೆ ಒಂದು ಕಾಲಮಿತಿ ನಿಗದಿಪಡಿಸಿದರೆ ಸಮಾನವಾದ, ಜಾತಿರಹಿತ ಮತ್ತು ವರ್ಗರಹಿತ ಸಮಾಜವನ್ನು ನಿರ್ಮಿಸಲು ಸಾಧ್ಯ.

ಸಿಜೆಐ ಯು.ಯು.ಲಲಿತ್‌
ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್‌ ಅವರು ನ್ಯಾ| ರವೀಂದ್ರ ಭಟ್‌ ಅವರ ಅಭಿಪ್ರಾಯಗಳನ್ನು ಅನುಮೋದಿಸುವ ಮೂಲಕ ಈ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದು ಸರಿಯಲ್ಲ ಎಂದು ತೀರ್ಪು ನೀಡಿದರು.

ನ್ಯಾ| ಜೆ.ಬಿ. ಪರ್ದಿವಾಲಾ
ಅಭಿವೃದ್ಧಿ ಹೊಂದಿದವರನ್ನು ಹಿಂದುಳಿದ ವರ್ಗಗಳಿಂದ ತೆಗೆದುಹಾಕಬೇಕು. ಇದರಿಂದ ಅಗತ್ಯವಿರುವವರಿಗೆ ಸಹಾಯ ಮಾಡಬಹುದು. ಮೀಸಲಾತಿ ಎಂಬುದು ಅಂತ್ಯವಲ್ಲ, ಅದು ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಪಡೆಯುವಂಥ ಹಾದಿ. ಅದನ್ನು ಸ್ಥಾಪಿತ ಹಿತಾಸಕ್ತಿಯಾಗಲು ಅವಕಾಶ ನೀಡಬಾರದು. ಸಮಾಜದ ದುರ್ಬಲ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಗೆ ಮುಖ್ಯ ಕಾರಣಗಳೇನೆಂದು ಅರಿತು, ಅದನ್ನು ನಿರ್ಮೂಲನೆ ಮಾಡುವುದರಲ್ಲಿ ನೈಜ ಪರಿಹಾರ ಅಡಗಿದೆ.

ನ್ಯಾ| ರವೀಂದ್ರ ಭಟ್‌
ಸಾಮಾಜಿಕ ಮತ್ತು ಹಿಂದುಳಿದ ವರ್ಗದ ಪ್ರಯೋಜನವನ್ನು ಪಡೆಯುವವರು ಉತ್ತಮ ಸ್ಥಾನವನ್ನು ಪಡೆಯುತ್ತಾರೆ ಎಂದು ನಮ್ಮನ್ನು ನಂಬಿಸಿ ಮೋಸ ಮಾಡಲಾಗುತ್ತಿದೆ. ಈ ನ್ಯಾಯಾಲಯವು 16 (1) ಮತ್ತು (4) ಒಂದೇ ಸಮಾನತೆಯ ತತ್ವದ ಮುಖಗಳು ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೆ, ಈ ತಿದ್ದುಪಡಿ ಯಿಂದ ದುಪ್ಪ ಟ್ಟು ಪ್ರಯೋಜನೆಗಳು ಸಿಗುತ್ತವೆ ಎಂಬುದು ತಪ್ಪು. ಆರ್ಥಿಕತೆಯ ಆಧಾರ ದಲ್ಲಿ ಮೀಸಲಾತಿ ನೀಡುವುದು ಸರಿ. ಆದರೆ ಈ ಇಡಬ್ಲ್ಯೂಎಸ್‌ ಕೋಟಾದಿಂದ ಎಸ್‌ಸಿ-ಎಸ್‌ ಮತ್ತು ಒಬಿಸಿಯನ್ನು ಹೊರಗಿಟ್ಟಿದ್ದು ಏಕೆ? ಇದು ತಾರತಮ್ಯದ ನೀತಿಯಾಗುವುದಿಲ್ಲವೇ?

“ಆರ್ಥಿಕ ಹಿಂದುಳಿಯುವಿಕೆಯನ್ನು ನಿರ್ಧರಿಸಲು ಸಿನ್ಹೋ ಆಯೋಗವನ್ನು ರಚಿಸಲಾಗಿದ್ದು, ಇದು ಇದು 2001ರ ಜನಗಣತಿಯನ್ನು ಆಧರಿಸಿದೆ. ಒಟ್ಟು ಎಸ್ಸಿ ಜನಸಂಖ್ಯೆಯ ಶೇ.38 ಮತ್ತು ಒಟ್ಟು ಎಸ್ಟಿ ಜನಸಂಖ್ಯೆಯ ಶೇ.48ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಅದು ಹೇಳುತ್ತದೆ. ಆರ್ಥಿಕವಾಗಿ ವಂಚಿತರಾದವ ರಲ್ಲಿ ಹೆಚ್ಚಿನವರು ಇಲ್ಲೇ ಇದ್ದಾರೆ. ಹಾಗೆಯೇ ಯಾವುದೇ ಕಾರಣಕ್ಕೂ ಇಂದಿರಾ ಸಹಾಯ್‌ ಕೇಸಿನಲ್ಲಿ ಹೇಳಿರುವಂತೆ ಶೇ.50ರ ಮಿತಿಯನ್ನು ತೆಗೆದುಹಾಕುವುದು ಸಾಧ್ಯವೇ ಇಲ್ಲ. “50 ಪ್ರತಿಶತ ನಿಯಮವನ್ನು ಉಲ್ಲಂ ಸಲು ಅನುಮತಿಸುವುದು ಮತ್ತಷ್ಟು ಉಲ್ಲಂಘನೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next