Advertisement

HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್‌: ದೇಶದಲ್ಲಿ 7ಕ್ಕೇರಿದ ಕೇಸ್‌

11:22 PM Jan 07, 2025 | Team Udayavani |

ಹೊಸದಿಲ್ಲಿ: ದೇಶದಲ್ಲಿ ಎಚ್‌ಎಂಪಿ ವೈರಸ್‌ ಮತ್ತಿಬ್ಬರು ಮಕ್ಕಳಲ್ಲಿ ಕಂಡು ಬಂದಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7ಕ್ಕೆ ಏರಿದೆ.

Advertisement

ಮಂಗಳವಾರ ಮಹಾರಾಷ್ಟ್ರದ ನಾಗಪುರದ 7 ಮತ್ತು 14 ವರ್ಷದ ಇಬ್ಬರು ಮಕ್ಕಳಲ್ಲಿ ಸೋಂಕು ಕಂಡುಬಂದಿದೆ. ತೀವ್ರ ಜ್ವರ ಹಾಗೂ ಕಫ‌ದ ಸಮಸ್ಯೆ ಹಿನ್ನೆಲೆಯಲ್ಲಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸೋಮವಾರ ಕರ್ನಾಟಕ, ತಮಿಳುನಾಡಿನಲ್ಲಿ ತಲಾ 2 ಮತ್ತು ಗುಜರಾತ್‌ನಲ್ಲಿ 1 ಕೇಸ್‌ ದಾಖಲಾಗಿತ್ತು.

ಉಸಿರಾಟ ಕಾಯಿಲೆ ಬಗ್ಗೆ ನಿಗಾ ಇಡಿ: ಕೇಂದ್ರ ಸೂಚನೆ

7 ಎಚ್‌ಎಂಪಿ ವೈರಸ್‌ ಕಂಡುಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದ್ದು, ಮಂಗಳವಾರ ಆರೋಗ್ಯ ಇಲಾಖೆ ಕಾರ್ಯದರ್ಶಿ ಪುಣ್ಯ ಸಲಿಲ್‌ ಶ್ರೀವಾಸ್ತವ್‌ ಎಲ್ಲ ರಾಜ್ಯಗಳ ಅಧಿಕಾರಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿದ್ದಾರೆ. ಐಎಲ್‌ಐ, ಎಚ್‌ಎಂಪಿವಿ ಸೇರಿ ಎಲ್ಲ ಉಸಿರಾಟ ಸಂಬಂಧಿ ಕಾಯಿ­ಲೆಗಳ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next