Advertisement

ಅಂತ್ಯಕ್ರಿಯೆಗೆ ಸ್ಥಳ ಪರಿಶೀಲನೆ: ವಿರೋಧ

07:16 AM Jul 08, 2020 | Lakshmi GovindaRaj |

ಕೊರಟಗೆರೆ: ಕೋವಿಡ್‌ 19ದಿಂದ ಮೃತಪಟ್ಟ ವರ ಅಂತ್ಯ ಸಂಸ್ಕಾರಕ್ಕೆ ಸ್ಥಳ ಗುರುತಿಸಲು ಬಂದಿದ್ದ ತಾಲೂಕು ಕಂದಾಯ ಇಲಾಖಾ ಅಧಿಕಾರಿಗಳನ್ನು ಕೊರಟಗೆರೆ, ಶಿರಾ ಮತ್ತು ಮಧುಗಿರಿ ತಾಲೂಕಿನ ಜನರು ವಿರೋಧ  ವ್ಯಕ್ತಪಡಿಸಿದರು.

Advertisement

ತಾಲೂಕಿನ ತೋವಿಕನಕೆರೆ ಗ್ರಾಪಂ ವ್ಯಾಪ್ತಿಯ ಶಿರಾ ಮತ್ತು ಮಧುಗಿರಿ ಸರ ಹದ್ದಿನ ಓಬನಹಳ್ಳಿ ಅರಣ್ಯ ಪ್ರದೇಶದಲ್ಲಿ 5 ಎಕರೆ ಜಾಗವನ್ನು ಕೋವಿಡ್‌ 19 ವೈರಸ್‌ ನಿಂದ ಮೃತಪಟ್ಟವರನ್ನು ಅಂತ್ಯ ಸಂಸ್ಕಾರ ಮಾಡಲು  ಗುರುತಿಸಲು ಕಂದಾಯ ಇಲಾಖಾ ಅಧಿಕಾರಿಗಳು ಬಂದಿದ್ದು, ವಿಷಯ ತಿಳಿದ ಮೂರು ತಾಲೂಕಿನ ನೂರಾರು ಜನರು ಜಮಾಯಿಸಿ ಕೋವಿಡ್‌ 19 ದಿಂದ ಮರಣ ಹೊಂದಿರು ವವರನ್ನು ಅಂತ್ಯ ಸಂಸ್ಕಾರ ಮಾಡಲು ಜಮೀನು ನೀಡುವುದಿಲ್ಲ ಎಂದು  ಪಟ್ಟು ಹಿಡಿದು ಮಾತಿನ ಚಕಮಕಿ ನಡೆಸಿದರು.

ಓಬನಹಳ್ಳಿ ಅರಣ್ಯ ಪರದೇಶವು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಶಿರಾ ಮತ್ತು ಮಧುಗಿರಿ ತಾಲೂಕುಗಳು ಹೊಂದಿಕೊಂಡಿದ್ದು ಈ ಸ್ಥಳ ಸೂಕ್ತವಲ್ಲ ಎಂದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ  ಕೊರಟಗೆರೆ ತಾಲೂಕು ಸಿಪಿಐ ನದಾಫ್ ಆಗಮಿಸಿ ಪ್ರತಿಭಟನೆ ನಡೆಸುವ ಜನರೊಂದಿಗೆ ಮಾತನಾಡಿ, ಕಂದಾಯ ಇಲಾಖಾ ಅಧಿಕಾರಿಗಳ ಮುಂದೆ ಪ್ರತಿಭಟನೆ ಮಾಡುವುದು ಸರಿಯಲ್ಲ. ಸಾರ್ವಜನಿಕರು ತಹಶೀಲ್ದಾರ್‌ರನ್ನು ಭೇಟಿಯಾಗಿ  ತಮ್ಮ ಸಮಸ್ಯೆಯನ್ನು ವಿವರಿಸಿ ಮನವಿ ಸಲ್ಲಿಸುವಂತೆ ತಿಳಿಹೇಳಿದ ನಂತರ ಸಾರ್ವಜನಿಕರು ಸ್ಥಳ ಖಾಲಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next