Advertisement

Waqf ಸಮಿತಿಯಿಂದ ದೂರ: ಇಂದು ಸ್ಪೀಕರ್‌ ಜತೆ ವಿಪಕ್ಷ ಚರ್ಚೆ?

01:10 AM Nov 05, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ವಿಧೇಯಕದ ಪರಿಶೀಲನೆಗಾಗಿ ರಚನೆಯಾಗಿರುವ ಸಂಸತ್‌ನ ಜಂಟಿ ಸದನ ಸಮಿತಿಯಿಂದ ದೂರ ಸರಿಯಲು ವಿಪಕ್ಷಗಳ ಸದಸ್ಯರು ಮುಂದಾಗಿದ್ದಾರೆ. ಮಂಗಳವಾರ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುವ ಸಾಧ್ಯತೆಯಿವೆ.

Advertisement

ಸಮಿತಿ ಅಧ್ಯಕ್ಷೆ ಜಗದಂಬಿಕಾ ಪಾಲ್‌ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುತ್ತಿದ್ದಾರೆ. ನಿಯಮಗಳಂತೆ ಕಲಾಪಗಳನ್ನು ನಡೆಸುತ್ತಿಲ್ಲ, ಬೇಕಾದ ಸಿದ್ಧತೆಗೆ ನಮಗೆ ಸಮಯ ನೀಡುತ್ತಿಲ್ಲ ಎಂದು ವಿಪಕ್ಷಗಳ ಸದಸ್ಯರು ಸ್ಪೀಕರ್‌ಗೆ ವಿವರಿಸುವ ಸಾಧ್ಯತೆಗಳಿವೆ. ಇದು ಹೀಗೇ ಮುಂದುವರಿದರೆ ನಾವು ಸಮಿತಿಯಿಂದ ಒತ್ತಾಯಪೂರ್ವಕವಾಗಿ ದೂರವಿರಬೇಕಾಗಿ ಬರಬಹುದು ಎಂದೂ ತಿಳಿಸಲು ವಿಪಕ್ಷ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next