Advertisement

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

12:50 AM Nov 24, 2024 | Team Udayavani |

ಬೆಂಗಳೂರು: ಅಲ್ಪಾವಧಿಯಲ್ಲೇ ಆಡಳಿತ ವಿರೋಧಿ ಅಲೆ ಸೃಷ್ಟಿಸುವಲ್ಲಿ ಯಶಸ್ಸು ಸಾಧಿಸಿರುವುದಾಗಿ ವಿಪಕ್ಷ ಗಳು ಬೀಗುತ್ತಿರುವಾಗಲೇ ಸದ್ದಿಲ್ಲದೆ ಮರ್ಮಾಘಾತ ನೀಡುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಅನಂತರ ಮೈತ್ರಿಪಕ್ಷಗಳಿಗೆ ಸಿಎಂ ವಿರುದ್ಧದ ಮುಡಾ ನಿವೇಶನ ಹಂಚಿಕೆ ಪ್ರಕರಣದ ಅಸ್ತ್ರ ಸಿಕ್ಕಿತು. ಅದನ್ನು ಕೈಗೆತ್ತಿಕೊಂಡ ಬಿಜೆಪಿ-ಜೆಡಿಎಸ್‌ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಿ ರಾಜ್ಯದ ಗಮನ ಸೆಳೆಯಿತು. ಇದಕ್ಕೂ ಮೊದಲು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗ ರಣ ಕೂಡ ಬಯಲಿಗೆ ಬಂದಿತ್ತು. ಉಪಚುನಾವಣೆ ಹೊಸ್ತಿಲಲ್ಲಿ ಅದೇ ಮೈತ್ರಿಪಕ್ಷಗಳಿಗೆ “ವಕ್ಫ್ ಆಸ್ತಿ’ ರೂಪದಲ್ಲಿ ಮತ್ತೂಂದು ಅಸ್ತ್ರ ಸಿಕ್ಕಿದ್ದರೂ ಸರಕಾರ ಸಮರ್ಥಿಸಿಕೊಂಡಿತು.

Advertisement

ಮುಖ್ಯವಾಗಿ ಆರೋಪಗಳಿಗೆ ಪ್ರತಿಯಾಗಿ ಬಿಜೆಪಿ ಅವಧಿಯಲ್ಲಾದ ಕೋವಿಡ್‌ ಸೇರಿದಂತೆ ಹಲವು ಹಗ ರಣಗಳ ವಿರುದ್ಧ ತೀವ್ರ ತನಿಖೆಗೆ ಕಾಂಗ್ರೆಸ್‌ ಮುಂದಾಯಿತು. ಅಷ್ಟೇ ಪರಿಣಾಮಕಾರಿ ಯಾಗಿ ಅದನ್ನು ಜನರಿಗೆ ತಲುಪಿಸಿತು. “ವಕ್ಫ್ ಆಸ್ತಿ’ ಮುಂದಿಟ್ಟುಕೊಂಡು ಹಿಂದೂಗಳ “ಮತಬ್ಯಾಂಕ್‌’ಗೆ ಕೈಹಾಕಲು ಮುಂದಾದ ಮೈತ್ರಿಪಕ್ಷಗಳಿಗೆ ಪ್ರತಿತಂತ್ರವಾಗಿ ನಿಲುವು ಸಮರ್ಥಿಸಿ ಕೊಳ್ಳುತ್ತಲೇ “ಅಹಿಂದ’ ಮತದಾರರನ್ನು ಸಂಪೂರ್ಣವಾಗಿ ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸಿಎಂ-ಡಿಸಿಎಂಗೆ ಬಲ ತಂದುಕೊಟ್ಟ ಗೆಲುವು

ಸಿಎಂಗೆ ತಮ್ಮ ಕುರ್ಚಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವಂತೆ ಮಾಡಿದೆ. ಮತ್ತೂಂದೆಡೆ ಡಿಸಿಎಂ ತಾನೂ ಒಕ್ಕಲಿಗರ ನಾಯಕ ಎಂದು ಬಿಂಬಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ. ಈಗ ಅಧಿಕಾರ ಹಂಚಿಕೆಗೆ ಮತ್ತಷ್ಟು ಗಟ್ಟಿಯಾಗಿ “ಕ್ಲೈಮ್‌’ ಮಾಡಿಕೊಳ್ಳಲು ಬಲ ದೊರೆತಂತಾಗಿದೆ. ಇದರೊಂದಿಗೆ “ನಾನೂ ಸಿಎಂ ಆಕಾಂಕ್ಷಿ’ ಎಂಬ ಪಕ್ಷದಲ್ಲಿನ “ಅಪಸ್ವರ’ಗಳಿಗೂ ಡಿಕೆಶಿ ಬ್ರೇಕ್‌ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next