ಮನಿಲಾ: ಫಿಲಿಪ್ಪೀನ್ಸ್‌ನ ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ರೈ ಎಂಬ ಹೆಸರಿನ ಚಂಡಮಾರುತ ಅಪ್ಪಳಿಸಿದ ಕಾರಣ ಅಸುನೀಗಿದವರ ಸಂಖ್ಯೆ 112ಕ್ಕೆ ಏರಿಕೆಯಾಗಿದೆ.
ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಬೊಹೋಲ್ ಪ್ರಾಂತ್ಯದಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ.
ಚಂಡಮಾರುತದ ಹೊಡೆತಕ್ಕೆ ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಕಡಿದು ಹೋಗಿದೆ. ಕೆಲವು ಸ್ಥಳಗಳಲ್ಲಿ ಕುಡಿಯಲು ನೀರು ಮತ್ತು ಆಹಾರ ಪೂರೈಕೆಗೇ ವ್ಯತ್ಯಯವಾಗಿದೆ.ಮಳೆ-ಗಾಳಿಯ ರಭಸಕ್ಕೆ ಆಸ್ಪತ್ರೆಗಳ ಛಾವಣಿಯೇ ಹಾರಿ ಹೋಗಿದೆ.
ಇದನ್ನೂ ಓದಿ:ಬೆಳೆದಿದ್ದ ಬೆಳ್ಳುಳ್ಳಿಗೆ ಸೂಕ್ತ ಬೆಲೆ ಸಿಗದ್ದಕ್ಕೆ ಬೆಳ್ಳುಳ್ಳಿಗೇ ಬೆಂಕಿ ಇಟ್ಟ!
18 ಸಾವಿರಕ್ಕೂ ಹೆಚ್ಚು ಮಿಲಿಟರಿ, ಪೊಲೀಸ್, ಕೋಸ್ಟ್ ಗಾರ್ಡ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಚಂಡಮಾರುತದಿಂದ ಹಾನಿಯಾದ ಪ್ರದೇಶಗಳಿಗೆ ತಲುಪಿದ್ದಾರೆ.
ಹೀಗಾಗಿ, ಅಲ್ಲಿ ಚಿಕಿತ್ಸೆ ನೀಡಲೂ ಅಡ್ಡಿಯಾಗಿದೆ. ಹಲವು ನಗರಗಳ ಮೇಯರ್‌ಗಳು ನೀಡಿದ ಮಾಹಿತಿ ಪ್ರಕಾರ ಅಸುನೀಗಿದವರ ಅಧಿಕೃತ ಸಂಖ್ಯೆ 72.