Advertisement

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

01:12 PM Nov 28, 2024 | Team Udayavani |

ಮುಂಬಯಿ: ಕಳೆದ ಕೆಲ ತಿಂಗಳಿನಲ್ಲಿ ಬಾಲಿವುಡ್‌ ತಾರಾ ಜೋಡಿ ಅಭಿಷೇಕ್‌ ಬಚ್ಚನ್ – ಐಶ್ವರ್ಯಾ‌ ರೈ ಅವರ ದಾಂಪತ್ಯ ಜೀವನ ಬಗ್ಗೆ ನಾನಾ ರೀತಿಯ ಸುದ್ದಿ ಹರಿದಾಡುತ್ತಿದೆ. ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ರೂಮರ್ಸ್‌ ಬಿಟೌನ್‌ ವಲಯದಲ್ಲಿ ಹರಿದಾಡುತ್ತಿದೆ.

Advertisement

ಬಿಗ್‌ ಬಿ ಕುಟುಂಬದ ಸೊಸೆ ಐಶ್ವರ್ಯಾ ರೈ ಕಳೆದ ಕೆಲ ಸಮಯದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅಭಿಷೇಕ್‌ ಬಚ್ಚನ್‌ ಅವರೊಂದಿಗೆ ಹಾಗೂ ಬಿಗ್‌ ಬಿ ಕುಟುಂಬದ ಜೊತೆ ಐಶ್ವರ್ಯಾ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ವಿಚಾರದ ನಡುವೆಯೇ ವಿಚ್ಚೇದನ ಸುದ್ದಿ ಹರಿದಾಡಿದೆ.

ಅಭಿಷೇಕ್‌ ಬಚ್ಚನ್‌ (Abhishek Bachchan) ಹಾಗೂ ಐಶ್ವರ್ಯಾ ರೈ (Aishwarya Rai) ದಾಂಪತ್ಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇಬ್ಬರು ಇದುವರೆಗೆ ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ.

ಇದನ್ನೂ ಓದಿ: Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

ಅಭಿಷೇಕ್‌ ಜತೆ ಐಶ್ವರ್ಯಾ ಇತ್ತೀಚೆಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ನಡುವೆ ಅಭಿಷೇಕ್‌ ಬಚ್ಚನ್ ನಟಿ ನಿಮ್ರತ್ ಕೌರ್ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿಯೂ ಕೆಲ ಸಮಯ ಹರಿದಾಡಿತ್ತು.

Advertisement

ಇದೀಗ ಐಶ್ವರ್ಯಾ ರೈ ಕಾರ್ಯಕ್ರಮದಲ್ಲಿ ʼಬಚ್ಚನ್‌ʼ ಹೆಸರನ್ನು ತೆಗೆದು ಹಾಕಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ದಾಂಪತ್ಯದ ವಿಚಾರ ಎಷ್ಟೇ ಹರಿದಾಡಿದರೂ ಐಶ್ವರ್ಯಾ ರೈ ಬಚ್ಚನ್‌ ಆಗಿಯೇ ಎಲ್ಲೆಡೆ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ಅವರು ʼಬಚ್ಚನ್‌ʼ ಸರ್ ನೇಮ್‌ ಇಲ್ಲದೆ ಕಾಣಿಸಿಕೊಂಡಿದ್ದಾರೆ.

ಬುಧವಾರ(ನ.27 ರಂದು) ಐಶ್ವರ್ಯಾ ಅವರು ದುಬೈನಲ್ಲಿ ನಡೆದ ಗ್ಲೋಬಲ್ ವುಮೆನ್ಸ್ ಫೋರಂನಲ್ಲಿ ಭಾಗವಹಿಸಿ, ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ್ದಾರೆ.

ಅವರು ವೇದಿಕೆಗೆ ಬರುವಾಗ ಅವರ ಪರಿಚಯವನ್ನು ಮಾಡುವ ಹೆಸರನ್ನು ಎಲ್‌ ಇಡಿ ಸ್ಕ್ರೀನ್‌ ಮೇಲೆ ಹಾಕಲಾಗಿದೆ. ಇಲ್ಲಿ ʼಐಶ್ವರ್ಯಾ ರೈʼ ಇಂಟರ್‌ ನ್ಯಾಷನಲ್‌ ಸ್ಟಾರ್‌ ಎಂದು ಪರಿಚಯಿಸಲಾಗಿದೆ. ಅವರ ಹೆಸರಿನಿಂದ ʼಬಚ್ಚನ್‌ʼ ಸರ್‌ ನೇಮ್‌ ತೆಗೆಯಲಾಗಿದೆ.

ಇದಲ್ಲದೆ ಕಾರ್ಯಕ್ರಮದ ನಿರೂಪಕಿ ಕೂಡ ನಟಿಯನ್ನು ಐಶ್ವರ್ಯಾ ರೈ ಎಂದು ಪರಿಚಯಿಸಿದ್ದಾರೆ. ಇದನ್ನು ನೋಡಿರುವ ಅಭಿಮಾನಿಗಳು ವಿಚ್ಛೇದನದ ವದಂತಿ ನಿಜವೇ ಎಂದು ಪ್ರಶ್ನಿಸಿದ್ದಾರೆ.

ಅನಂತ್‌ – ರಾಧಿಕಾ ಮದುವೆಗೆ ಅಮಿತಾಭ್‌ ಬಚ್ಚನ್‌(Amitabh Bachchan) ಅವರ ಕುಟುಂಬ ಜೊತೆಯಾಗಿ ಬಂದಿತ್ತು. ಆದರೆ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯ ಪ್ರತ್ಯೇಕವಾಗಿ ಫೋಟೋಗ್ರಾಫರ್‌ ಗಳಿಗೆ ಪೋಸ್‌ ಕೊಟ್ಟಿದ್ದರು. ಬಿಗ್‌ ಬಿ ಕುಟುಂಬದ ಜೊತೆ ಐಶ್ವರ್ಯಾ ರೈ ಫೋಟೋಗೆ ನಿಂತಿಲ್ಲ. ಈ ವಿಚಾರ ಅಭಿಷೇಕ್‌ – ಐಶ್ವರ್ಯಾ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಮಾತು ಅಲ್ಲಿಂದಲ್ಲೇ ಹಬ್ಬಿತ್ತು.

2007ರ ಏಪ್ರಿಲ್ ನಲ್ಲಿ ಅಭಿಷೇಕ್ – ಐಶ್ವರ್ಯ ಮದುವೆಯಾಗಿದ್ದರು. 2011ರಲ್ಲಿ ಈ ದಂಪತಿಗೆ ಆರಾಧ್ಯ ಎಂಬ ಹೆಣ್ಣು ಮಗು ಜನಿಸಿತು.

ಅಂದಹಾಗೆ ಇನ್ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್‌ ಎಂದೇ ತಮ್ಮ ಹೆಸರನ್ನು ನಟಿ ಇಟ್ಟುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next