Advertisement

ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಶಾಸಕ

06:43 AM Jul 02, 2020 | Lakshmi GovindaRaj |

ತುಮಕೂರು: ಕೆಲವೇ ತಿಂಗಳಲ್ಲಿ ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಯಲಿದೆ. 200 ಕೋಟಿ ರೂ. ವೆಚ್ಚದಲ್ಲಿ 24/7 ಸ್ಕೀಂ ಅಡಿಯಲ್ಲಿ ನಗರಕ್ಕೆ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌  ಹೇಳಿದರು. ನಗರದ 2ನೇ ವಾರ್ಡ್‌ನ ಅಂತರಸನಹಳ್ಳಿ ಎಸ್‌ಎಲ್‌ಎನ್‌ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

Advertisement

ಸಂಸದ ಜಿ.ಎಸ್‌. ಬಸವರಾಜು ಅವರು ಈ ಹಿಂದೆ  ಅನುಮೋ ದನೆ ಮಾಡಿಸಿದ್ದ 200 ಕೋಟಿ ರೂ.ಗಳ ಅನುದಾನದಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ನಗರದ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಭಾಗವನ್ನು ನಾನು ಶಾಸಕನಾಗಿ ಆಯ್ಕೆ  ಯಾದ ಮೇಲೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತುಮಕೂರು ನಗರದ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ ಕೊಟ್ಟಂತಹ 15 ಕೋಟಿ ರೂ.ಗಳಲ್ಲಿ ವಿವಿಧ ಕಾಮಗಾರಿ ಗಳಿಗೆ ಚಾಲನೆ ನೀಡಲಾಗಿದೆ.

ಇದೇ ಅನುದಾನದಲ್ಲಿ ಅಂತರಸನಹಳ್ಳಿಯ ಎಸ್‌ಎಲ್‌ ಎನ್‌ ಬಡಾವಣೆಯಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ 1.50 ಕಿ.ಮೀ ಉದ್ದದ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು. ಅಂತರಸನಹಳ್ಳಿಯ ಕೆಲವು ಪ್ರದೇಶಗಳು ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟರೆ, ಇನ್ನೂ ಕೆಲವು ಪ್ರದೇಶಗಳು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ. ಯಾವ ರೀತಿ ಮಿಶ್ರಣ ಮಾಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದರು.

ಎಸ್‌ಟಿಪಿ,  ಟಿಎಸ್‌ಪಿ ಅನುದಾನ ವನ್ನೂ ಈ ಬಡಾವಣೆಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು. ವೈದ್ಯರು ಮತ್ತು ಪತ್ರಕರ್ತರ ದಿನಾಚರಣೆ ಪ್ರಯುಕ್ತ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರು ವೈದ್ಯರಿಗೆ ಮತ್ತು ಪತ್ರಕರ್ತರಿಗೆ ಶುಭಾಶಯ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next