Advertisement

ಶೇ. 64.38 ಮತದಾನ : ಶಹಾಬಾದನಲ್ಲಿ ನಗರಸಭೆ ಚುನಾವಣೆ

10:07 AM Sep 01, 2018 | |

ಕಲಬುರಗಿ: ಜಿಲ್ಲೆಯ ಏಳು ತಾಲೂಕುಗಳ 168 ವಾರ್ಡ್‌ಗಳಿಗಾಗಿ ಶುಕ್ರವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 64.38 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ.

Advertisement

ಚಿತ್ತಾಪುರ ತಾಲೂಕಿನ ಶಹಾಬಾದ ನಗರಸಭೆಯ 27 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 11,743 ಪುರುಷರು, 12,011 ಮಹಿಳೆಯರು ಹೀಗೆ ಒಟ್ಟು 23,754 ಮತದಾರರು ಮತ ಚಲಾಯಿಸಿದ್ದು, ಶೇ. 54.01 ರಷ್ಟು ಮತದಾನವಾಗಿದೆ.

ಸೇಡಂ ತಾಲೂಕಿನ ಸೇಡಂ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 10,948 ಪುರುಷರು ಮತ್ತು 10,557 ಮಹಿಳೆಯರು ಸೇರಿದಂತೆ ಒಟ್ಟು 21,505 ಮತದಾರರು ಮತ ಚಲಾಯಿಸುವ ಮೂಲಕ ಶೇ. 67.51 ರಷ್ಟು ಮತದಾನ ದಾಖಲಿಸಿದ್ದಾರೆ. ಚಿತ್ತಾಪುರ ತಾಲೂಕಿನ ಚಿತ್ತಾಪುರ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 8677 ಪುರುಷರು ಮತ್ತು 8959 ಮಹಿಳೆಯರು ಸೇರಿದಂತೆ ಒಟ್ಟು 17,436 ಮತದಾರರು ಮತ ಚಲಾಯಿಸಿದ್ದು, ಶೇ. 67.42 ರಷ್ಟು ಮತದಾನವಾಗಿದೆ.
 
ಆಳಂದ ತಾಲೂಕಿನ ಆಳಂದ ಪುರಸಭೆಯ 27 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 10,881 ಪುರುಷರು, 10,224 ಮಹಿಳೆಯರು ಹೀಗೆ ಒಟ್ಟು 21,105 ಮತದಾರರರು ಮತ ಚಲಾಯಿಸಿ ಶೇ. 62.52 ರಷ್ಟು ಮತದಾನವಾಗಿದೆ.

ಜೇವರ್ಗಿ ತಾಲೂಕಿನ ಜೇವರ್ಗಿ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 8017 ಪುರುಷರು
ಹಾಗೂ 7960 ಮಹಿಳೆಯರು ಸೇರಿದಂತೆ ಒಟ್ಟು 15,977 ಮತದಾರರು ಮತ ಚಲಾಯಿಸಿದ್ದಾರೆ. ಶೇ. 71.10 ರಷ್ಟು
ಮತದಾನವಾಗಿದೆ. ಚಿಂಚೋಳಿ ತಾಲೂಕಿನ ಚಿಂಚೋಳಿ ಪುರಸಭೆಯ 23 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 5071 ಪುರುಷ ಹಾಗೂ 4984 ಮಹಿಳೆಯರು ಹಾಗೂ ಒಬ್ಬರು ಇತರರು ಹೀಗೆ ಒಟ್ಟು 10,056 ಮತದಾರರು ಮತ ಚಲಾಯಿಸಿ ಶೇ. 70.44 ರಷ್ಟು ಮತದಾನವಾಗಿದೆ.

ಅಫಜಲಪುರ ತಾಲೂಕಿನ ಅಫಜಲಪುರ ಪುರಸಭೆಯ 22 ವಾರ್ಡುಗಳಿಗಾಗಿ ನಡೆದ ಮತದಾನದಲ್ಲಿ 7054 ಪುರುಷರು ಹಾಗೂ 6527 ಮಹಿಳೆಯರು ಸೇರಿದಂತೆ ಒಟ್ಟು 13,581 ಮತದಾರರು ಮತ ಚಲಾಯಿಸಿ ಶೇ. 72.03 ರಷ್ಟು ಮತದಾನವಾಗಿದೆ.

Advertisement

ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟು 62,391 ಪುರುಷರು ಹಾಗೂ 61,022 ಮಹಿಳೆಯರು ಹಾಗೂ ಒಬ್ಬರು ಇತರರು ಸೇರಿದಂತೆ ಒಟ್ಟು 1,23,414 ಮತದಾರರು ಮತ ಚಲಾಯಿಸಿ ಶೇ. 64.38 ರಷ್ಟು ಮತದಾನ ಮಾಡಿದ್ದಾರೆ.

ಸ್ಥಳೀಯ ಸಂಸ್ಥೆಯ ಸಂಸ್ಥೆ ಚುನಾವಣೆ ಶಾಂತಿಯುತ ಚುನಾವಣೆ ಶಾಂತಿಯು 
ಚಿತ್ತಾಪುರ: ಪಟ್ಟಣದ ಪುರಸಭೆ ಚುನಾವಣೆ ಪ್ರಯುಕ್ತ 23 ವಾರ್ಡ್‌ಗಳಿಗೆ ನಡೆದ ಮತದಾನ ಶಾಂತಿಯುತವಾಗಿದ್ದು, ಶೇ. 67.42ರಷ್ಟು ಮತದಾನವಾಗಿದೆ. ಬೆಳಗ್ಗೆ ನೀರಸ ಮತದಾನ ನಡೆದು ಮಧ್ಯಾಹ್ನದ ಹೊತ್ತಿಗೆ ಹೆಚ್ಚಿನ ಮತದಾರರು ಬಂದು ಮತದಾನ ಮಾಡಿದರು. ಮಧ್ಯಾಹ್ನ 12 ಕ್ಕೆ ಶೇ. 26.79 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3ಕ್ಕೆ ಶೇ. 51ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 2ರಿಂದ ಮತದಾನ ಮಾಡಲು ಮತದಾರರು ಹೆಚ್ಚು ಒಲವು ತೋರಿಸಿದರು. ಚುನಾವಣೆ ಪ್ರಯುಕ್ತ 31 ಮತದಾನ ಕೇಂದ್ರಗಳನ್ನು ರಚಿಸಲಾಗಿತ್ತು. ಒಟ್ಟು 25,863 ಮತದಾರರಿದ್ದು, ಅದರಲ್ಲಿ 17436 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. 8759 ಮಹಿಳೆಯರು, 8677 ಪುರುಷರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಎಂದು ತಹಶೀಲ್ದಾರ್‌ ಮಲ್ಲೇಶಾ ತಂಗಾ ತಿಳಿಸಿದ್ದಾರೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳ ಕಾರ್ಯಕರ್ತರು ಮತದಾರರ ಮನೆಗಳಿಗೆ ಹೋಗಿ ಮತದಾರರನ್ನು ಕರೆ ತಂದು ಹಾಕಿಸುತ್ತಿದ್ದರು. ವೃದ್ಧರು, ಅಂಗವಿಕಲ ಮತದಾರರು ಬೇರೊಬ್ಬರ ಸಹಾಯದಿಂದ ತಳ್ಳುವ ಗಾಡಿ, ವ್ಹೀಲ್‌ ಚೇರ್‌ಗಳ ಮೂಲಕ ಬಂದು ಮತದಾನ ಮಾಡಿದರು. ಕೆಲವರು ವಾಹನಗಳಲ್ಲಿ ಬಂದು ಮತದಾನ ಮಾಡಿದರು. ಶ್ರಾವಣ ಮಾಸದ
ಶುಕ್ರವಾರ ವಿಶೇಷ ಲಕ್ಷ್ಮೀ ಪೂಜೆ ಇದ್ದಿದ್ದರಿಂದ ಮಹಿಳೆಯರು ಮಧ್ಯಾಹ್ನ ವೇಳೆಗೆ ಹೆಚ್ಚಾಗಿ ಬಂದು ಮತದಾನ ಮಾಡಿದರು.

ಪ್ರತಿಷ್ಠಿತ ವಾರ್ಡ್‌ಗಳಿರುವ 1, 2, 3, 9, 10, 12, 13, 14, 16, 20, 21, 22 ಮತಗಟ್ಟೆಯ ಹೊರಗೆ ಕಾರ್ಯಕರ್ತರ ದಂಡು ತುಂಬಿ ತುಳುಕಿತ್ತು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಎಸ್ಪಿ ಎನ್‌. ಶಶಿಕುಮಾರ ಅವರು ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣೆ ಶಾಂತಿಯುತ ಬಗ್ಗೆ ಪರಿಶೀಲನೆ ನಡೆಸಿದರು. ಡಿವೈಎಸ್ಪಿ ಕೆ. ಬಸವರಾಜ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ನಟರಾಜ ಲಾಡೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next