Advertisement

ಜನರು ಬಹಳ ಎಚ್ಚರಿಕೆಯಿಂದ ಇರಬೇಕು

06:14 PM Jun 14, 2021 | Team Udayavani |

ಬೆಂಗಳೂರು: ಹೆಬ್ಟಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರು 3 ಸಾವಿರ ಜನರಿಗೆಆಹಾರದ ಕಿಟ್‌ ವಿತರಿಸಿದ್ದು, ಕಾರ್ಯಕ್ರಮಕ್ಕೆಕೇಂದ್ರ ರಸಾಯನಿಕ ಗೊಬ್ಬರ ಖಾತೆ ಸಚಿವಡಿ.ವಿ. ಸದಾನಂದಗೌಡ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರಸಚಿವ ಡಿ.ವಿ. ಸದಾನಂದಗೌಡ, ಕೊರೊನಾ3ನೇ ಅಲೆ ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡುತ್ತೇನೆ.ಕಳೆದ 2 ವರ್ಷಗಳಿಂದ ಕೊರೊನಾ ತಡೆಗಟ್ಟಲು ಮೋದಿ ಪಟ್ಟ ಪಾಡು ಹೇಳತೀರದು.ಮೋದಿಯವರ ಪರಿಶ್ರಮದಿಂದ ಇಂದುಕೊರೊನಾ ಹತೋಟಿಗೆ ಬಂದಿದೆ.

ಪ್ರತಿಯೊಬ್ಬರು ವ್ಯಾಕ್ಸಿನ್‌ ಹಾಕಿಸಿಕೊಳ್ಳುವ ಮೂಲಕಕೊರೊನಾ ತಡೆಗಟ್ಟಲು ಪ್ರಯತ್ನಿಸಬೇಕು.ಹಿಂದಿನ ದಿನಗಳಲ್ಲಿ ವ್ಯಾಕ್ಸಿನ್‌ ಉತ್ಪಾದನೆಗೆ ಸ್ವಲ್ಪತಡವಾಯಿತು. ಆದರೇ ಈಗ ವ್ಯಾಕ್ಸಿನ್‌ ಕೊರತೆಯನ್ನು ಮೋದಿಯವರ ಪರಿಶ್ರಮ ನೀಗಿ ಸಿದೆ.ನಮ್ಮ ಮಿತ್ರರು ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಡಿಎಂದು ತಪ್ಪು ಸಂದೇಶ ರವಾನಿಸಿದ್ದರು. ಆದರೇಈಗ ವ್ಯಾಕ್ಸಿನ್‌ಗಾಗಿ ಅವರೇ ದಂಬಾಲು ಬಿದ್ದಿದ್ದಾರೆ. ನಾವೆಲ್ಲರೂ ಕೊರೊನಾ ಓಡಿಸಲುಕೈಜೊಡಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, 3ಸಾವಿರ ಕೊರೊನಾ ಸಂತ್ರಸ್ತರಿಗೆ ರೆಷನ್‌ ಕಿಟ್‌ಗಳನ್ನು ವಿತರಣೆ ಮಾಡುತ್ತೇವೆ. ಮುಂದಿನದಿನಗಳಲ್ಲಿ ಶಾಲಾ ಮಕ್ಕಳಿಗೂ ಒಳ್ಳೆಯದನ್ನುಮಾಡಲಿದ್ದೇವೆ. ಕಾಂಗ್ರೆಸ್‌ನವರು ಮಿತಿಮೀರಿದ್ದಾರೆ, ಅವರಿಗೆ ಬುದ್ಧಿ ಕಲಿಸಬೇಕು.ಕಾಂಗ್ರೆಸ್‌ನವರು ಮಾಡಬೇಕಾಗಿರುವ ಕೆಲಸವನ್ನು ಮಾಡಿ ತಮ್ಮ ಮಾರ್ಯದೆ ಉಳಿಸಿಕೊಳ್ಳಲಿ ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next