Advertisement
ವೃಷಭ: ಹಲವು ಬಗೆಯ ಕಾರ್ಯಕ್ರಮಗಳ ಒತ್ತಡ. ಉದ್ಯಮ ವಿಸ್ತರಣೆಗೆ ವಿವಿಧ ಮೂಲಗಳಿಂದ ಸಹಾಯ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ . ಪ್ರಾಪ್ತವಯಸ್ಕರಿಗೆ ವಿವಾಹ ನಿಶ್ಚಯ. ವ್ಯವಹಾರಾರ್ಥ ಸಣ್ಣ ಪ್ರಯಾಣ ಸಂಭವ.
Related Articles
Advertisement
ಕನ್ಯಾ: ವ್ಯಾಪಾರಿಗಳಿಗೆ ವಿಕ್ರಯದÇÉೇ ವಿರಾಮದ ಆನಂದ. ವಿದ್ಯಾರ್ಥಿಗಳಿಗೆ ಮನೋರಂಜನೆ. ಕುಶಲ ಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಉದ್ಯೋಗ ಅರಸುವವರಿಗೆ ಶುಭ ಸಮಾಚಾರ. ಉದ್ಯೋಗಸ್ಥ ಮಹಿಳೆಯರಿಗೆ ವಿರಾಮ.
ತುಲಾ: ಒಂದರ ಮೇಲೊಂದರಂತೆ ಬಂದು ಬೀಳುವ ಕೆಲಸಗಳು. ಉತ್ಪನ್ನಗಳ ಗುಣಮಟ್ಟ ಸುಧಾರಣೆಯತ್ತ ಗಮನ. ಕೃಷಿ, ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಮಗ್ನತೆ. ಹಿರಿಯರ ಮನೆಯಲ್ಲಿ ಕುಟುಂಬಸ್ಥರ ಭೇಟಿ. ವಿವಾಹ ಕಾರ್ಯಕ್ಕೆ ಮುನ್ನುಡಿ.
ವೃಶ್ಚಿಕ: ಉದ್ಯೋಗ, ವ್ಯವಹಾರ ಕ್ಷೇತ್ರಗಳ ಮಿತ್ರರ ಭೇಟಿ. ಹಿರಿಯರ ಮನೆಯಲ್ಲಿ ದೇವತಾಕಾರ್ಯ. ವ್ಯವಹಾರದ ಸಂಬಂಧ ದಕ್ಷಿಣಕ್ಕೆ ಪ್ರಯಾಣ. ಪರವೂರಿನಲ್ಲಿರುವ ಮಕ್ಕಳ ಆಗಮನ. ಹಿರಿಯರ ಆರೋಗ್ಯ ಸುಧಾರಣೆ.
ಧನು: ದಂಪತಿಗಳ ನಡುವೆ ಅನುರಾಗ ವೃದ್ಧಿ.ಕುಟುಂಬದಲ್ಲಿ ಸಮೃದ್ಧಿಯ ಲಕ್ಷಣಗಳು. ಶಿಕ್ಷಿತರಿಗೆ ಯೋಗ್ಯ ಉದ್ಯೋಗ ಲಭಿಸುವ ಭರವಸೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಕೈಗೊಂಡರೆ ಶುಭ. ಅವಿವಾಹಿತರಿಗೆ ವಿವಾಹ ಯೋಗ.
ಮಕರ: ಕುಟುಂಬದಲ್ಲಿ ಪ್ರೀತಿ, ವಾತ್ಸಲ್ಯ ವೃದ್ಧಿ. ಸಣ್ಣ ಉದ್ಯಮಗಳಿಗೆ ಶುಭಕಾಲ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ. ದೇವ ಮಂದಿರ ಸಂದರ್ಶನ. ಶುಭಕಾರ್ಯದ ನಿಮಿತ್ತ ಪ್ರಯಾಣ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ.
ಕುಂಭ: ಸದುದ್ದೇಶಕ್ಕೆ ಸಹಾಯ ಮಾಡಿದ ತೃಪ್ತಿ. ಕುಟುಂಬದ ಕ್ಷೇಮಕ್ಕೆ ಹೊಸ ಯೋಜನೆ. ಸಮಾಜದಲ್ಲಿ ಗೌರವ, ಜನಪ್ರಿಯತೆ ವೃದ್ಧಿ. ಹಣಕಾಸಿನ ಬಗ್ಗೆ ಜಾಗ್ರತೆಯಿರಲಿ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ಅಪರೂಪದ ಬಂಧುಗಳ ಆಗಮನ, ಮನೆಮಂದಿಗೆ ಆನಂದ.
ಮೀನ: ನಾಳೆಯ ಕಾರ್ಯಗಳ ಆಯೋಜನೆ. ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಯೋಜನೆ. ಹಿಂದಿನ ಸಹಚರರ ಭೇಟಿ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ. ಸಂಸಾರದಲ್ಲಿ ನೆಮ್ಮದಿ. ಮಕ್ಕಳ ಭವಿಷ್ಯದ ಕುರಿತು ಚಿಂತೆ. ಕುಟುಂಬದ ದೇವರ ಸನ್ನಿಧಾನಕ್ಕೆ ಭೇಟಿ.