Advertisement

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

11:33 AM Jan 06, 2025 | Team Udayavani |

ಬೆಂಗಳೂರು: ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಾಲೇಂಜಿಂಗ್‌ ಸ್ಟಾರ್‌ ನಟ ದರ್ಶನ್‌ ಅವರಿಗೆ ಮೈಸೂರಿಗೆ ತೆರಳಲು ಕೋರ್ಟ್‌ ನೀಡಿದ್ದ ಎರಡು ವಾರಗಳ ಗಡುವು ಭಾನುವಾರಕ್ಕೆ (ಜನವರಿ 5) ಅಂತ್ಯಗೊಂಡಿದೆ. ಈ ಬೆನ್ನಲ್ಲೇ ಸೋಮವಾರ ಬೆಂಗಳೂರಿಗೆ ಆಗಮಿಸುವ ನಟ ದರ್ಶನ್‌ ತಮ್ಮ ಅನು ಮತಿ ವಿಸ್ತರಣೆ ಮಾಡು ವಂತೆ ಮತ್ತೆ ನ್ಯಾಯಾಲ ಯದ ಮೊರೆ ಹೋಗುವ ಸಾಧ್ಯತೆಯಿದೆ.

Advertisement

ಅನಾರೋಗ್ಯಕ್ಕೊಳಗಾಗಿರುವ ತಾಯಿಯ ಆರೈಕೆ, ಫಾರ್ಮ್ಹೌಸ್‌ನಲ್ಲಿರುವ ಪ್ರಾಣಿಗಳನ್ನು ನೋಡಿ ಕೊಳ್ಳಬೇಕು. ಜತೆಗೆ ಬೆನ್ನು ನೋವಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ  ವಿಚಾರವಾಗಿ ಮೈಸೂರಿನ ಆಸ್ಪತ್ರೆಯಲ್ಲಿ ವೈದ್ಯರ ಸಲಹೆ ಪಡೆಯಬೇಕು ಹಾಗೂ ಇತರೆ ಕಾರಣಗಳನ್ನು ನೀಡಿ ನಟ ದರ್ಶನ್‌ ಅವರು  ಬೆಂಗಳೂರಿನ ಸಿಸಿಎಚ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿ ಸಿದ ನ್ಯಾಯಾಲಯವು 2 ವಾರಗಳ ಗಡುವು ನೀಡಿತ್ತು. ಅದು ಭಾನುವಾರ ರಾತ್ರಿಗೆ ಮುಕ್ತಾಯ ಗೊಳ್ಳಲಿದೆ. ಹೀಗಾಗಿ ನಟ ದರ್ಶನ್‌ ಸೋಮವಾರ ಬೆಂಗಳೂರಿಗೆ ವಾಪಸ್‌ ಬರಬೇಕಿದೆ. ಅಲ್ಲದೇ ರೇಣುಕಸ್ವಾಮಿ ಕೊಲೆ ಪ್ರಕರಣ ಮುಗಿಯುವರೆಗೂ ಬೆಂಗಳೂರು ಬಿಟ್ಟು ಹೋಗದಂತೆ ದರ್ಶನ್‌ಗೆ ಕೋರ್ಟ್‌ ಸೂಚನೆ ನೀಡಿತ್ತು.

ಅನುಮತಿ ವಿಸ್ತರಣೆಗೆ ಅರ್ಜಿ ಸಲ್ಲಿಕೆ ಸಾಧ್ಯತೆ: 

ಮೈಸೂರಿಗೆ ತೆರಳಲು ಮತ್ತೆ ಅನುಮತಿ ವಿಸ್ತರಣೆ ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲುವ ಸಲುವಾಗಿ ದರ್ಶನ್‌ ಅವರು ತಮ್ಮ ವಕೀಲರ ಜೊತೆಗೆ  ಚರ್ಚೆ ಮಾಡಿದ್ದಾರೆ. ಮತ್ತೆ ಕೆಲ ವಾರಗಳ ಕಾಲ ವಿಸ್ತರಣೆ ಮಾಡುವಂತೆ ಕೋರಿ ಸೋಮವಾರ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ದರ್ಶನ್‌ ಸದ್ಯ ಬೆನ್ನುನೋವನ್ನು ಫಿಜಿಯೋಥೆರಪಿ ಮೂಲಕ ವಾಸಿ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶಸ್ತ್ರಚಿಕಿತ್ಸೆಗೂ ಅವರು  ಅನುಮತಿ ನೀಡಿದ್ದರು ಎಂಬುದು ಗೊತ್ತಾಗಿದೆ. ಹೀಗಾಗಿ ಈ ಎಲ್ಲಾ ಕಾರಣಗಳಿಂದ ಮತ್ತೆ ಅನುಮತಿ ಕೊಡಬೇಕು ಎಂದು ನ್ಯಾಯಾಲಯಕ್ಕೆ  ಮನವಿ ಮಾಡಲಿದ್ದಾರೆ.

ಬೆಂಗಳೂರಿನ ಸಿಸಿಎಚ್‌ ನ್ಯಾಯಾಲಯದಲ್ಲಿ ನಟ ದರ್ಶನ್‌ ಅವರಿಗೆ ಅನುಮತಿ ನೀಡಿದರೆ ಅಲ್ಲಿಯೇ ಉಳಿದುಕೊಳ್ಳುತ್ತಾರೆ ಇಲ್ಲವಾದರೆ ಬೆಂಗಳೂರಿಗೆ ಅನಿವಾರ್ಯವಾಗಿ ಹಿಂದಿರುಗಬೇಕಾಗುತ್ತದೆ.

Advertisement

ಸಂಕ್ರಾಂತಿ ಬಳಿಕ ದರ್ಶನ್‌ಗೆ ಶಸ್ತ್ರಚಿಕಿತ್ಸೆ  ಸಾಧ್ಯತೆ:

ಮತ್ತೂಂದೆಡೆ ಕಾಲು ನೋವು ಹೆಚ್ಚಾಗಿದ್ದರಿಂದ ದರ್ಶನ್‌ ಕೊನೆಗೂ ಸರ್ಜರಿ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಜನವರಿ 14 ಸಂಕ್ರಾಂತಿ ಮುಗಿದ ಬಳಿಕ ದರ್ಶನ್‌ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗುತ್ತಾರೆ ಎಂದು ಹೇಳಲಾಗಿದೆ. ಶಸ್ತ್ರಚಿಕಿತ್ಸೆಯಿಂದ‌ ಮಾತ್ರ ದರ್ಶನ್‌ಗೆ ಬೆನ್ನು ನೋವು ಹಾಗೂ ಕಾಲು ನೋವು ಗುಣಮುಖ ವಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಕೊನೆಗೂ ದರ್ಶನ್‌ ಸರ್ಜರಿ ಮಾಡಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next