Advertisement

ಕೆಂಭಾವಿ ವಲಯದಲ್ಲಿ ಶಾಂತಿಯುತ ಮತದಾನ

04:37 PM May 13, 2018 | Team Udayavani |

ಕೆಂಭಾವಿ: ಪಟ್ಟಣ ಸೇರಿದಂತೆ ವಲಯದಲ್ಲಿ ಶಾಂತಿಯುತವಾಗಿ ನೆರವೇರಿತು. ಶಹಾಪುರ ಹಾಗೂ ಸುರಪುರ ಕ್ಷೇತ್ರಗಳಿಗೆ ಒಳಪಡುವ ವಲಯದ ಹಲವು ಮತಗಟ್ಟೆಗಳಲ್ಲಿ ಕೆಲವು ಸಣ್ಣಪುಟ್ಟ ಗೊಂದಲಗಳು ಕಂಡು ಬಂದವು.

Advertisement

ಶಹಾಪುರ ಮತಕ್ಷೇತ್ರ ವ್ಯಾಪ್ತಿಯ 101 ಹಾಗೂ ಸುರಪುರ ಮತಕ್ಷೇತ್ರ ವ್ಯಾಪ್ತಿಯ 26 ಮತಗಟ್ಟೆ ಸೇರಿದಂತೆ ಒಟ್ಟು 127 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.

ಶನಿವಾರ ವರುಣನ ಸಿಂಚನ ತಂಪೆರಗಿದ್ದರಿಂದ ಮತದಾನದ ಉತ್ಸಾಹ ಇಮ್ಮಡಿಯಾಯಿತು. ಪಟ್ಟಣದ ಕೆಲವು ಮತಗಟ್ಟೆಗಳಲ್ಲಿ ಮತದಾರರ ಯಾದಿಯಲ್ಲಿ ಹೆಸರು ಇರದಿರುವುದು, ಹೆಸರು ಒಂದು ಮತಗಟ್ಟೆಯಲ್ಲಿ ಸಂಖ್ಯೆ
ಮತ್ತೂಂದು ಮತಗಟ್ಟೆಯಲ್ಲಿ, ಕೆಲವರ ಹೆಸರು ಮತದಾರರ ಪಟ್ಟಿಯಲ್ಲಿದ್ದರೂ ಮತದಾನದಿಂದ ವಂಚಿತಗೊಂಡ ಘಟನೆ ಹೊರತುಪಡಿಸಿ ಬಹುತೇಕ ಮತದಾನ ಶಾಂತಿಯುತವಾಗಿ ನಡೆಯಿತು.

ಪಟ್ಟಣದ ಒಟ್ಟು 14,770 ಮತದಾರರಲ್ಲಿ 8600 ಮತದಾರರು ಹಕ್ಕು ಚಲಾಯಿಸಿದರು. ಹಾಗಾಗಿ ಶೇ. 58.22ರಷ್ಟು ಮತದಾನವಾಗಿದೆ.  ಪಟ್ಟಣದ ಮತಗಟ್ಟೆ ಸಂಖ್ಯೆ 97ರಲ್ಲಿ ಬೆಳಗ್ಗೆ ಪ್ರಾರಂಭಾವಾದ ಮತದಾನ ಒಂದು ತಾಸಿನ ನಂತರ ಮತಯಂತ್ರದಲ್ಲಿ ದೋಷ ಕಂಡು ಬಂದಿತು. ಈ ಹಿನ್ನೆಲೆಯಲ್ಲಿ ಒಂದು ತಾಸಿಗೂ ಅಧಿಕ ಕಾಲ ಮತದಾನ ಸ್ಥಗಿತಗೊಳಿಸಲಾಯಿತು. ತಂತ್ರಜ್ಞರು ಆಗಮಿಸಿ ಮತಯಂತ್ರ ಸರಿಪಡಿಸಿದ ನಂತರ ಪುನಃ ಪ್ರಾರಂಭವಾಯಿತು.

ಶಹಾಪುರ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅಮೀನರೆಡ್ಡಿ ಪಾಟೀಲ ಯಾಳಗಿ ತಾಯಿ ಸಿದ್ದಮ್ಮ ಗೌಡತಿ ಜೊತೆ ಆಗಮಿಸಿ ಸ್ವಗ್ರಾಮ ಯಾಳಗಿ ಮತಗಟ್ಟೆ ಸಂಖ್ಯೆ 55ರಲ್ಲಿ ಮತದಾನ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next