Advertisement

900 ಕೋಟಿ ರೂ.ಗಡಿ ದಾಟಿದ ಪಠಾಣ್‌ ಸಿನೆಮಾ!

01:27 AM Feb 12, 2023 | Team Udayavani |

ಬಾಲಿವುಡ್‌ ನಟ ಶಾರುಖ್‌ ಖಾನ್‌ಗೆ ಬಿಗ್‌ ಬ್ರೇಕ್‌ ನೀಡಿದ ಪಠಾಣ್‌ ವಿಶ್ವಾದ್ಯಂತ ಕಲೆಕ್ಷನ್‌ನಲ್ಲಿ 900 ಕೋಟಿ ರೂ.ಗಳಿಕೆ ದಾಟುವ ಮೂಲಕ ದಾಖಲೆ ನಿರ್ಮಿಸಿದೆ.

Advertisement

ಕೆಜಿಎಫ್ ಹಿಂದಿ ಆವೃತ್ತಿಯ ದೇಶಿ ಗಳಿಕೆ ಹಿಂದಿಕ್ಕಿ ಸೈ ಎನಿಸಿಕೊಂಡಿದ್ದ ಪಠಾಣ್‌ ಸಿನೆಮಾ ಈಗ ವಿಶ್ವದಲ್ಲೇ ಅತ್ಯಂತ ಹೆಚ್ಚುಗಳಿಕೆ ಕಂಡ ಹಿಂದಿ ಸಿನೆಮಾ ಎನ್ನುವ ಖ್ಯಾತಿಗೂ ಪಾತ್ರವಾಗಿದೆ.

ಯಶ್‌ ರಾಜ್‌ ಫಿಲ್ಮ್ಸ್ ಗಳಿಕೆಯ ವರದಿ ತೆರೆದಿಟ್ಟಿದ್ದು, ದೇಶದಲ್ಲಿ 558.40 ಕೋಟಿ ರೂ., ವಿದೇಶಗಳಲ್ಲಿ 342.60 ಕೋಟಿ ರೂ.ಗಳಿಕೆ ಮೂಲಕ ಪಠಾಣ್‌ ಸಿನೆಮಾದ ಜಾಗತಿಕ ಗಳಿಕೆ 901 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next