Advertisement

UI Movie: ಉಪ್ಪಿ ʼಯುಐʼ ಟ್ರೇಲರ್‌ ನೋಡಿ ಬಾಲಿವುಡ್‌ ನಟ ಆಮಿರ್‌ ಖಾನ್‌ ಶಾಕ್.!

12:27 PM Dec 12, 2024 | Team Udayavani |

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ (Upendra Rao) ನಿರ್ದೇಶನದ ʼಯುಐʼ (UI Movie) ರಿಲೀಸ್‌ಗೆ ಸಿದ್ದವಾಗಿದೆ. ಪ್ಯಾನ್‌ ಇಂಡಿಯಾ ʼಯುಐʼಗೆ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌  ಸಾಥ್‌ ನೀಡಿದ್ದಾರೆ.

Advertisement

ಈಗಾಗಲೇ ತನ್ನ ಟೈಟಲ್‌ನಿಂದಲೇ ಸಖತ್‌ ಸದ್ದು ಮಾಡಿರುವ ʼಯುಐʼ ಸಿನಿಮಾ ರಿಲೀಸ್‌ಗೂ ಮುನ್ನ ವಿಭಿನ್ನ ಪ್ರಚಾರದಿಂದ ಸದ್ದು ಮಾಡಿದೆ. ʼಚಿಕ್ಕದು – ದೊಡ್ಡದುʼ ಎನ್ನುವ ಹಾಡಿನ ಪ್ರೋಮೊ ಬಿಟ್ಟು ತಲೆಗೆ ಹುಳು ಬಿಟ್ಟಿದ್ದ ಉಪ್ಪಿ ಆ ಬಳಿಕ ಟೀಸರ್, ʼಟ್ರೋಲ್‌ʼ ಹಾಡನ್ನು ರಿಲೀಸ್‌ ಗಮನ ಸೆಳೆದಿದ್ದರು. ಬರೀ ಕತ್ತಲೆಯಲ್ಲೇ ಸೌಂಡ್‌ ಹಾಕಿ ಟೀಸರ್‌ ಎಂದಿದ್ದರು.

ಇದಾದ ಬಳಿಕ ಇತ್ತೀಚೆಗೆ ಉಪ್ಪಿ ಯುಐ ʼವಾರ್ನರ್‌ʼ ರಿಲೀಸ್‌ ಮಾಡಿದ್ದರು. ಆ ಮೂಲಕ ಕಲಿಯುಗದ ಕಥೆಯನ್ನು ವಿಭಿನ್ನವಾಗಿ ಉಪ್ಪಿ ಹೇಳಲಿದ್ದಾರೆ ಎನ್ನುವ ಮಾತಿಗೆ ತಕ್ಕಂತೆ ʼಯುಐʼ ವಾರ್ನರ್‌ʼ ನಲ್ಲಿ 2040 ರಲ್ಲಿ ಜಗತ್ತು ಹೇಗಿರಲಿದೆ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.

ಜಾಗತಿಕ ತಾಪಮಾನ, ಕೋವಿಡ್‌ 19, ಹಣದುಬ್ಬರ, ಎಐ, ನಿರುದ್ಯೋಗ, ಯುದ್ಧದ ಪರಿಣಾಮ ಬಡ ಜನರ ಮೇಲೆ ಭವಿಷ್ಯದಲ್ಲಿ ಯಾವ ರೀತಿಯ ಪರಿಣಾಮ ಬೀಳಲಿದೆ ಎನ್ನುವುದನ್ನು ಉಪ್ಪಿ ಹೇಳಿದ್ದಾರೆ.

Advertisement

ಈ ಯುಯ ವಾರ್ನರ್‌ ಸಖತ್‌ ಗಮನ ಸೆಳೆದಿದ್ದು, ಇದಕ್ಕೆ ಬಾಲಿವುಡ್‌ ನಟ ಆಮಿರ್‌ ಖಾನ್‌ (Aamir Khan) ಅವರು ಮೆಚ್ಚುಗೆ ಕೊಟ್ಟಿದ್ದಾರೆ.

ʼʼನಾನು ಉಪೇಂದ್ರ ದೊಡ್ಡ ಅಭಿಮಾನಿ. ಅವರ ಸಿನಿಮಾ ಡಿಸೆಂಬರ್‌ 20 ರಂದು ರಿಲೀಸ್‌ ಆಗಲಿದೆ. ಟ್ರೇಲರ್‌ ಅದ್ಭುತವಾಗಿದೆ. ನಾನು ಅದನ್ನು ನೋಡಿ ಫಿದಾ ಆಗಿದ್ದೇನೆ. ಉಪೇಂದ್ರ ಅವರೇ ನೀವು ತುಂಬಾ ಚೆನ್ನಾಗಿ ಟ್ರೇಲರ್‌ ಮಾಡಿದ್ದೀರಿ. ನನ್ನ ಪ್ರಕಾರ ಇದು ದೊಡ್ಡ ಹಿಟ್‌ ಆಗುತ್ತದೆ. ಹಿಂದಿ ಪ್ರೇಕ್ಷಕರೂ ಕೂಡ ಇದನ್ನು ಇಷ್ಟಪಡುತ್ತಾರೆ. ನಾನು ಟ್ರೇಲರ್‌ ನೋಡಿ ಶಾಕ್‌ ಆದೆ. ಅತ್ಯದ್ಭುತ ಟ್ರೇಲರ್‌ ಇದು. ನಿಮಗೆ ಒಳ್ಳೆಯದಾಗಲಿ ಆಲ್‌ ದಿ ಬೆಸ್ಟ್.‌ ಸಿನಿಮಾ ದೊಡ್ಡ ಹಿಟ್‌ ಆಗಲಿ” ಎಂದು ಹಾರೈಸಿದ್ದಾರೆ. ಪಕ್ಕದಲ್ಲಿದ್ದ ಉಪ್ಪಿ ಅವರು ಆಮಿರ್‌ ಅವರಿಗೆ ಥ್ಯಾಂಕ್ಯೂ ಸರ್‌ ಎಂದಿದ್ದಾರೆ.

ಉಪೇಂದ್ರ ನಿರ್ದೇಶನದ ‌ʼಯುಐʼ ಸಿನಿಮಾಕ್ಕೆ ಕೆ.ಪಿ ಶ್ರೀಕಾಂತ್, ಜಿ.ಮನೋಹರನ್‌ ಬಂಡವಾಳ ಹಾಕಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್‌ 20 ರಂದು ಸಿನಿಮಾ ರಿಲೀಸ್‌ ಆಗಲಿದೆ.

ಇಂದ್ರಜಿತ್ ಲಂಕೇಶ್, ಓಂ ಪ್ರಕಾಶ್ ರಾವ್, ನಿಧಿ ಸುಬ್ಬಯ್ಯ, ಮುರಳಿ ಶರ್ಮಾ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next