Advertisement
ಮತ್ತೊಂದೆಡೆ ಜಿಲ್ಲಾ ಕೇಂದ್ರದಲ್ಲಿನ ಸಾರಿಗೆ ಇಲಾಖೆ ಕಚೇರಿಯಲ್ಲಿ ಆರ್‌ಟಿಒ ಸೇರಿ 6 ಮಂದಿ ಕಾರ್ಯನಿರ್ವ ಹಿಸುತ್ತಿದ್ದು, ಒಬ್ಬರೇ ಎರಡು ಮೂರು ಹೊಣೆ ಹೊರಬೇಕಿದೆ. ಸರಕು ಸಾಗಾಣಿಕೆ, ಸಂಚಾರ ನಿಯಮ ಉಲ್ಲಂಘಿಸುವವರನ್ನು ಕೇಳುವವರೇ ಇಲ್ಲದಂತಾಗಿದೆ. ತಿಂಗಳ ಗಟ್ಟಲೇ ಕಾಯ್ದರೂ ಜನರ ಕೆಲಸ ಕಾರ್ಯಗಳು ಆಗುತ್ತಿಲ್ಲ. ವಾಹನ ತಪಾಸಣೆಗೂ ಹೋಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಮಾನಸಿಕ ಒತ್ತಡದಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ:ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಂತಾಮಣಿ ತಾಲೂಕಿಗೆ ಪ್ರತ್ಯೇಕ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಉಳಿದ ತಾಲೂಕಿನ ಜನ ಜಿಲ್ಲಾ ಕೇಂದ್ರದ ಆರ್‌ಟಿಒ ಕಚೇರಿ ಆಶ್ರಯಿಸಬೇಕಾಗಿದೆ. ಪ್ರಸ್ತುತ ಆರ್‌ಟಿಒ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಹನಗಳ ತಪಾಸಣೆ, ಇನ್ನಿತರೆ ಕೆಲಸಗಳನ್ನು ನಿಯೋಜನೆಮೇರೆಗೆ ಬರುವ ಇನ್ಸ್‌ಪೆಕ್ಟರ್‌ಗಳು ಮಾತ್ರ ನಿರ್ವಹಿಸು ವಂತಾಗಿದೆ. ಕೆಲವರನ್ನು ಹೊರಗುತ್ತಿಗೆ ಆಧಾರದ
ಮೇರೆಗೆ ನೇಮಿಸಿಕೊಳ್ಳಲಾಗಿದೆ. ಆದರೆ, ಪ್ರಮುಖ ಜವಾಬ್ದಾರಿ ನೀಡಲು ಅವಕಾಶ ಇಲ್ಲದೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚುವರಿ ಹೊಣೆ ಹೊರಬೇಕಿದೆ. ಮನವಿ ಸಲ್ಲಿಕೆ:ಚಿಕ್ಕಬಳ್ಳಾಪುರದ ಆರ್‌ಟಿಒ ಕಚೇರಿಯಲ್ಲಿ ಖಾಲಿ ಹುದ್ದೆ ಭರ್ತಿಗೆ ಇಲ್ಲಿನ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ನೇಮಕ ಮಾಡಿಲ್ಲ. ನಿಯೋಜನೆ ಮೇರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸುವ ಕಾಯಕ ರೂಢಿಸಿಕೊಂಡಿದ್ದಾರೆ. ಒಟ್ಟಾರೆ
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತವರು ಜಿಲ್ಲೆಯ ಆರ್‌ಟಿಒ ಕಚೇರಿಯಲ್ಲಿ ಅನೇಕ ಹುದ್ದೆಗಳು ಖಾಲಿ ಬಿದ್ದಿದ್ದು, ಅದನ್ನು ಭರ್ತಿ ಮಾಡಲು ಕ್ರಮ
ಕೈಗೊಳ್ಳಬೇಕಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಿಯೋಜನೆ ಮೇರೆಗೆ ಸೇವೆ ಒದಗಿಸುತ್ತಿದ್ದೇವೆ. ಚಿಂತಾಮಣಿಯಲ್ಲಿ ಸಂಭವಿಸಿರುವ ದುರಂತಕ್ಕೆ ಸಂಬಂಧಿಸಿದಂತೆ ಅಲ್ಲಿ ಪ್ರಾದೇಶಿಕ ಸಹಾಯಕ ಅಕಾರಿಗಳಕಚೇರಿ ತೆರೆದಿದ್ದೇವೆ, ಅನಧಿಕೃತ ವಾಹನಗಳ ಸಂಚಾರಕ್ಕೆಕಡಿವಾಣ ಹಾಕಲು ಕಠಿಣ ಕ್ರಮಕೈಗೊಳ್ಳುತ್ತೇವೆ.
● ಮಂಜುನಾಥ್, ಪ್ರಾದೇಶಿಕ ಸಾರಿಗೆ
ಅಧಿಕಾರಿ, ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳ ಹಾದು ಹೋಗುತ್ತದೆ. ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಸಂಚರಿಸುತ್ತಿವೆ ಅವು ಸುಸ್ಥಿತಿಯಲ್ಲಿದೆಯೇ? ಎಂದು ತಪಾಸಣೆ ಮಾಡಲು ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಕೊರತೆ ಕಾಣುತ್ತದೆ. ಜೊತೆಗೆ ಆರ್‌ಟಿಒ ಕಚೇರಿಯಲ್ಲಿ ಆಡಳಿತ ಮತ್ತು ತಾಂತ್ರಿಕ ಸಿಬ್ಬಂದಿ ನೇಮಕ ಮಾಡಬೇಕು. ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ವಾಹನ ದಟ್ಟಣೆಯ ಅನುಪಾತಕ್ಕೆ ತಕ್ಕಂತೆ ಸೂಕ್ತ ರೀತಿಯ ಸೌಲಭ್ಯ ಮತ್ತು ವ್ಯವಸ್ಥೆ ಒದಗಿಸಲು ಸರ್ಕಾರ ಕ್ರಮಕೈಗೊಳ್ಳಬೇಕು.
● ಮಳ್ಳೂರು ಶಿವಣ್ಣ, ಪ್ರಗತಿಪರ ಹೋರಾಟಗಾರ – ಎಂ.ಎ.ತಮೀಮ್ ಪಾಷ