Advertisement

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

11:24 PM Dec 18, 2024 | Team Udayavani |

ಬೆಳಗಾವಿ: ರಾಜ್ಯದಲ್ಲಿ ಶಕ್ತಿ ಯೋಜನೆ ಬಳಿಕ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಹೆಚ್ಚಳವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

Advertisement

ವಿಧಾನ ಪರಿಷತ್‌ದಲ್ಲಿ ಬುಧವಾರ ಬಿಜೆಪಿ ಯ ಎಸ್‌.ವಿ. ಸಂಕನೂರ ಅವರ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರಿಸಿದ ಅವರು, ಶಕ್ತಿ ಯೋಜನೆಗೆ ಮುನ್ನ ಪ್ರತೀನಿತ್ಯ ರಾಜ್ಯದಲ್ಲಿ 93.46 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಈಗ ಪ್ರತೀದಿನ 1.16 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ ಎಂದರು.

ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ 4 ವರ್ಷಗಳಲ್ಲಿ ಹೊಸ ಬಸ್‌ಗಳ ಖರೀದಿಯಾಗಿರಲಿಲ್ಲ. ಕಳೆದ ಸಾಲಿನಲ್ಲಿ ನಮ್ಮ ಸರಕಾರ 4,304 ಹೊಸ ಬಸ್‌ ಖರೀದಿ ಮಾಡಿದೆ. ಇದಲ್ಲದೆ ಹೆಚ್ಚುವರಿಯಾಗಿ 1,346 ಬಸ್‌ಗಳ ಖರೀದಿಗಾಗಿ ಕ್ರಮ ವಹಿಸಿದೆ ಎಂದರು. ನಾಲ್ಕೂ ಸಾರಿಗೆ ನಿಗಮಗಳಲ್ಲಿ 9000 ಚಾಲನ ಸಿಬಂದಿ ನೇಮಕಾತಿಗೆ ಸರಕಾರ ಅನುಮತಿ ನೀಡಿದ್ದು, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 1,583 ಚಾಲಕ, ನಿರ್ವಾಹಕ, ಬಿಎಂಟಿಸಿಯಲ್ಲಿ 2,000 ನಿರ್ವಾಹಕರ ನೇಮಕಾತಿ ನಡೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next