Advertisement

Karnataka; ಕನ್ನಡ ನಾಮಫ‌ಲಕ ಮಸೂದೆಗೆ ಅಂಗೀಕಾರ

12:45 AM Feb 21, 2024 | Team Udayavani |

ಬೆಂಗಳೂರು: ನಗರ ಸಹಿತ ರಾಜ್ಯದ ಎಲ್ಲ ನಾಮಫ‌ಲಕಗಳಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯ ಮತ್ತು ಆದ್ಯತೆಯೊಂದಿಗೆ ಪ್ರದರ್ಶಿಸುವ ಸಂಬಂಧದ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ- 2024′ ಮಂಗಳವಾರ ಮೇಲ್ಮನೆಯಲ್ಲೂ ಅಂಗೀಕಾರಗೊಂಡಿತು. ಇದರೊಂದಿಗೆ ಕನ್ನಡಿಗರು ವಿಶೇಷವಾಗಿ ಕನ್ನಡಪರ ಸಂಘಟನೆಗಳ ಬಹುದಿನಗಳ ಹೋರಾಟಕ್ಕೆ ಜಯ ಸಿಕ್ಕಿದೆ.

Advertisement

ಮೇಲ್ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಂಡಿಸಿದ ಮಸೂದೆಯನ್ನು ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಒಕ್ಕೊರಲಿನಿಂದ ಬೆಂಬಲಿಸಿದರು. ಈ ಕಾಯ್ದೆ ಕೇವಲ ಕಡತಕ್ಕೆ ಸೀಮಿತಗೊಳ್ಳದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕು ಎಂದರು. ಮಸೂದೆ ಈಗಾಗಲೇ ಕೆಳಮನೆಯಲ್ಲಿ ಅನುಮೋದನೆಗೊಂಡಿದೆ.

ಮಸೂದೆಯ ಪ್ರಕಾರ ಸರಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿಯೊಂದಿಗೆ ಕಾರ್ಯನಿರ್ವ ಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಹೊಟೇಲ್‌ಗ‌ಳು ಮತ್ತಿತರ ಮಳಿಗೆಗಳ ನಾಮಫ‌ಲಕಗಳಲ್ಲಿ ಕನ್ನಡ ಭಾಷೆ ಶೇ. 60ರಷ್ಟು ಮತ್ತು ಮೇಲ್ಭಾಗದಲ್ಲಿ ಪ್ರದರ್ಶಿತವಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next