Advertisement

Uttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿ

11:49 PM Oct 23, 2024 | Team Udayavani |

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿನ ಭೂಮಿ ಮತ್ತು ಗುಡ್ಡ ಕುಸಿತ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು 100 ಕೋಟಿ ರೂ. ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ ಸರಕಾರಕ್ಕೆ ಮನವಿ ಮಾಡಿದೆ.

Advertisement

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲೆಯಲ್ಲಿ 439 ಸ್ಥಳಗಳಲ್ಲಿ ಭೂ ಕುಸಿತದ ಅಪಾಯವಿದೆ ಎಂದು ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ ತಜ್ಞರು ಗುರುತಿಸಿದ್ದಾರೆ.

ಇದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಭೂ ಕುಸಿತ, ಗುಡ್ಡ ಕುಸಿತ ಪ್ರದೇಶಗಳಲ್ಲಿ ಸುರಕ್ಷಿತ ಕ್ರಮ, ತಡೆಗೋಡೆ ನಿರ್ಮಾಣವನ್ನು ಹೆದ್ದಾರಿ ಪ್ರಾಧಿಕಾರ, ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆಗಳು ಮಾಡಲಿವೆ.

ರಾಜ್ಯ ಹೆದ್ದಾರಿ ಮತ್ತು ಕೆಲ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಅತಿ ಅಪಾಯದ ಸ್ಥಳದಲ್ಲಿ ಸುರಕ್ಷತ ಕ್ರಮಗಳನ್ನು ಜಿಲ್ಲಾಡಳಿತ ಮಾಡಲಿದೆ. ಈ ಕಾಮಗಾರಿಗಳ ತುರ್ತು ಕಾರ್ಯಕ್ಕೆ ಹಣಕಾಸಿನ ಪ್ರತ್ಯೇಕ ಅನುದಾನ ಬೇಕು. ಅದಕ್ಕಾಗಿ ಅಪರ ಕಾರ್ಯದರ್ಶಿಗಳಿಗೆ ಭೂ ಕುಸಿತ ತಡೆ ಯೋಜನೆಯ ಪ್ಲಾನ್‌ ಸಹಿತ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next