Advertisement

ವಿಭಜನೆ ಸ್ಮರಣಾ ದಿನ: ಟಾಕ್‌ವಾರ್‌ : ನೆಹರೂ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್‌ ಆರೋಪ

12:41 AM Aug 15, 2022 | Team Udayavani |

ಹೊಸದಿಲ್ಲಿ: ಭಾರತ-ಪಾಕಿಸ್ಥಾನ ವಿಭಜನೆ­ ನೆನಪಿಗೆ ಈ ವರ್ಷದಿಂದ ಆಚರಿಸ­ಲಾಗುತ್ತಿರುವ “ವಿಭಜನೆ ಸ್ಮರಣಾ ದಿನ’ವಾದ ರವಿವಾರ, ಬಿಜೆಪಿ, ಕಾಂಗ್ರೆಸ್‌ ನಡುವೆ ವಾಕ್ಸಮರ ನಡೆದಿದೆ.

Advertisement

ದೇಶ ವಿಭಜನೆಗೆ ಜವಾಹರ್‌ಲಾಲ್‌ ನೆಹರೂ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಅದಕ್ಕೆ ಪೂರಕವೆಂಬಂತೆ ನೆಹರೂ ಮಾಡಿದ್ದ ಭಾಷಣದ ವೀಡಿಯೋವನ್ನು ಟ್ವೀಟ್‌ ಮಾಡಿದೆ.

ಮೊಹಮ್ಮದ್‌ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌ನ ಒತ್ತಡದಿಂದಾಗಿ ನೆಹರೂ, ಪಾಕಿಸ್ಥಾನ ರಚನೆಗೆ ಒಪ್ಪಿದ್ದರು ಎಂದು ಟ್ವೀಟ್‌ನಲ್ಲಿ ಆರೋಪಿಸಲಾಗಿದೆ. 1947­ರಲ್ಲಿ ಉಂಟಾಗಿದ್ದ ಬೆಳವಣಿಗೆಗಳ ಬಗ್ಗೆ ಹಿಂದಿಯಲ್ಲಿ ಹಿನ್ನೆಲೆ ಧ್ವನಿ ಹೊಂದಿರುವ ವೀಡಿಯೋವನ್ನು ಬಿಜೆಪಿ ಅಪ್‌ಲೋಡ್‌ ಮಾಡಿದೆ.

ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಅದಕ್ಕೆ ತಿರುಗೇಟು ನೀಡಿ ಟ್ವೀಟ್‌ ಮಾಡಿದ್ದಾರೆ. “ಇತಿಹಾಸದ ಅತ್ಯಂತ ನೋವಿನ ಕ್ಷಣಗಳನ್ನು ಮತ್ತೆ ನೆನಪಿಸುವ ಮೂಲಕ ಸದ್ಯದ ರಾಜಕೀಯ ವಿಚಾರಗಳಿಗೆ ಆಹಾರವನ್ನಾಗಿ ಪರಿವರ್ತಿಸುವುದು ಪ್ರಧಾನಿಯವರ ಉದ್ದೇಶ. ಆಧುನಿಕ ಸಾವರ್ಕರರು ಮತ್ತು ಜಿನ್ನಾಗಳು ದೇಶವನ್ನು ಒಡೆಯುವ ಪ್ರಯತ್ನ ಮುಂದುವರಿಸಿ­ದ್ದಾರೆ. ವಿಭಜನೆ ಸಮಯದಲ್ಲಿ ಲಕ್ಷಾಂತರ ಜನರು ಜೀವ ಕಳೆದುಕೊಂಡರು ಮತ್ತು ದಿಕ್ಕಾ ಪಾಲಾದರು. ದೇಶ ವಿಭಜನೆ ಯೋಜನೆ ಸಾವರ್ಕರ್‌ ಅವರದ್ದೇ ಆಗಿತ್ತು. ಆ ಯೋಜನೆಗೆ ಜಿನ್ಹಾ ರೂಪು ಕೊಟ್ಟರಷ್ಟೇ’ ಎಂದು ದೂರಿದ್ದಾರೆ.

ಮೋದಿ, ಅಮಿತ್‌ ಶಾ ಗೌರವ: ಪ್ರಧಾನಿ ಮೋದಿ ಸೇರಿ ಅನೇಕ ಗಣ್ಯರು ವಿಭಜನೆ ವೇಳೆ ಹೋರಾಡಿದ ವೀರರನ್ನು ಸ್ಮರಿಸಿದ್ದಾರೆ. “ವಿಭಜನೆ ಸಮಯದಲ್ಲಿ ಪ್ರಾಣ ಬಲಿಕೊಟ್ಟ ವೀರರಿಗೆ ಗೌರವ ಸಮರ್ಪಿಸುತ್ತೇನೆ. ಹಾಗೆಯೇ ಆ ಕರಾಳ ಸಮಯ ದಲ್ಲಿಯೂ ಹೋರಾ­ಡಿ­­ದವರನ್ನು ನಾನು ಶ್ಲಾಘಿಸು ತ್ತೇನೆ’ ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Advertisement

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಟ್ವೀಟ್‌ ಮಾಡಿದ್ದು, “1947ರ ವಿಭಜನೆಯು ಇತಿಹಾಸದಲ್ಲಿಯೇ ಮರೆಯಲಾಗ­ದ ಅಮಾನ ವೀಯ ಅಧ್ಯಾಯ. ಹಿಂಸೆ, ದ್ವೇಷವು ಲಕ್ಷಾಂತರ ಜನರ ಜೀವನವನ್ನು ಕಿತ್ತುಕೊಂಡಿತು ಮತ್ತು ಅವರನ್ನು ದಿಕ್ಕಾಪಾಲಾಗಿಸಿತು. ಈ ಘಟನೆಯು ದೇಶದ ಯುವ ಸಮಾಜಕ್ಕೆ ಶಾಂತಿಯಿಂದ ಇರಲು ಸ್ಫೂರ್ತಿ ತುಂಬುತ್ತದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next