Advertisement

Paris Olympics; ಆ್ಯತ್ಲೀಟ್‌ ಗಳಿಂದ ಶ್ರೇಷ್ಠ ನಿರ್ವಹಣೆ: ಮೋದಿ ವಿಶ್ವಾಸ

01:01 AM Jul 05, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡವು ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತದೆ ಮತ್ತು 140 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪ್ಯಾರಿಸ್‌ ಗೇಮ್ಸ್‌ಗೆ ಭಾರತೀಯ ತಂಡವು ಸರಿಸುಮಾರು 120 ಆ್ಯತ್ಲೀಟ್‌ಗಳನ್ನು ಕಳುಹಿಸಲಿದ್ದು ಟೋಕಿಯೊ ಗೇಮ್ಸ್‌ಗಿಂತ ಉತ್ತಮ ಮಟ್ಟದ ನಿರ್ವಹಣೆಯನ್ನು ನೀಡುವ ಭರವಸೆ ಇಡಲಾಗಿದೆ. ಟೋಕಿಯೊದಲ್ಲಿ ಭಾರತ ತಂಡ ಒಂದು ಚಿನ್ನ ಸಹಿತ ಏಳು ಪದಕ ಜಯಿಸಿತ್ತು. ನೀರಜ್‌ ಚೋಪ್ರಾ ಜಾವೆಲಿನ್‌ನಲ್ಲಿ ಚಿನ್ನ ಜಯಿಸಿದ್ದರು.

“ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ಗೆ ತೆರಳುತ್ತಿರುವ ಭಾರತೀಯ ತಂಡದೊಂದಿಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದರು. ನಮ್ಮ ಆ್ಯತ್ಲೀಟ್‌ಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಭಾರತವನ್ನು ಹೆಮ್ಮೆಪಡಿಸುವ ವಿಶ್ವಾಸ ನನಗಿದೆ. ಅವರ ಜೀವನ ಪಯಣ ಮತ್ತು ಯಶಸ್ಸು 140 ಕೋಟಿ ಭಾರತೀಯರಿಗೆ ಭರವಸೆಯನ್ನು ನೀಡುತ್ತದೆ ಎಂದು ಪ್ರಧಾನಿಯವರು ಸಂವಾದದ ಬಳಿಕ “ಎಕ್ಸ್‌’ ಜಾಲತಾಣದಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next