Advertisement

ಸ್ಟೀಲ್‌ ಬಾಕ್ಸಲ್ಲಿ ಪಾರ್ಸೆಲ್‌

11:52 AM Jun 27, 2018 | |

ಪುಣೆ: ಮಹಾರಾಷ್ಟ್ರದಲ್ಲಿ ಈಗ ಪ್ಲಾಸ್ಟಿಕ್‌ ಬಳಕೆ ಮೇಲೆ ನಿಷೇಧವಿದೆ. ಹೀಗಾಗಿ, ಹೋಟೆಲ್‌, ರೆಸ್ಟಾರೆಂಟ್‌ಗಳಲ್ಲಿ ಊಟ, ಗ್ರಾಹಕರ ಆಯ್ಕೆಯ ತಿನಿಸುಗಳನ್ನು ಪಾರ್ಸೆಲ್‌ ಮಾಡಿ ಕೊಡಲು ಕಷ್ಟವಾಗಿದೆ. ಅದಕ್ಕೆ ಕರ್ನಾಟಕ ಮೂಲದ  ರೆಸ್ಟಾ ರೆಂಟ್‌ ಮಾಲೀಕರು ಹೊಸ ಉಪಾಯ ಕಂಡು ಕೊಂಡಿದ್ದಾರೆ!

Advertisement

200 ರೂ. ಠೇವಣಿ ನೀಡಿ, ಅವರದ್ದೇ ಹೋಟೆಲ್‌ನ ಊಟದ ಸ್ಟೀಲ್‌ ಡಬ್ಬಿಯಲ್ಲಿ ಪಾರ್ಸೆಲ್‌ ನೀಡುತ್ತಾರೆ. ಬಳಕೆಯ ಬಳಿಕ ಗ್ರಾಹಕರು ಲಂಚ್‌ ಬಾಕ್ಸ್‌ ವಾಪಸ್‌ ನೀಡುವ ವೇಳೆ 200 ರೂ. ಠೇವಣಿಯನ್ನು ಮರಳಿಸುತ್ತಾರೆ. ಗಮನಾರ್ಹ ಅಂಶವೆಂದರೆ ಪುಣೆಯಲ್ಲಿ ಊಟ- ತಿಂಡಿಗಳನ್ನು ಮನೆ ಬಾಗಿಲಿಗೆ ನೀಡುವಂಥ ಝೋಮಾಟೋ, ಸ್ವಿಗ್ಗಿಯಂಥ ಆ್ಯಪ್‌ಗ್ಳೂ ಪ್ಲಾಸ್ಟಿಕ್‌ ನಿಷೇಧದ ಬಳಿಕ ಆಹಾರ ಪೂರೈಕೆ ಮಾಡುತ್ತಿಲ್ಲ. 

ಆದರೆ ಪುಣೆಯಲ್ಲಿರುವ ಕರ್ನಾಟಕ ಮೂಲದ ಗಣೇಶ್‌ ಶೆಟ್ಟಿ ಮಹಾರಾಷ್ಟ್ರ ಸರ್ಕಾರ ನಿರ್ಧಾರವನ್ನು ಶ್ಲಾಘಿ ಸಿದ್ದಾರೆ. ಪರಿ ಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್‌ ನಿಷೇಧ ಸರಿ ಯಾದದ್ದೇ ಎಂದು ಹೇಳಿದ್ದಾರೆ. ಈ ನಿರ್ಧಾರ ದಿಂದ ಹೋಟೆಲ್‌ ಉದ್ಯಮಕ್ಕೆ ತೊಂದರೆಯಾಗಿದೆ ಎನ್ನುವುದು ಸರಿಯೇ. ಆದರೆ, ಪರ್ಯಾಯ ವ್ಯವಸ್ಥೆಗೆ ಇನ್ನಷ್ಟು ಕಾಲಾವಕಾಶ ನೀಡಬೇಕಾಗಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ, ಬೃಹನ್ಮುಂಬೈ ನಗರ ಪಾಲಿಕೆ ಕಳೆದ 3 ದಿನಗಳಲ್ಲಿ ಪ್ಲಾಸ್ಟಿಕ್‌ ನಿಷೇಧ ನಿಯಮ ಉಲ್ಲಂಘನೆಗೆ ದಂಡದ ರೂಪದಲ್ಲಿ ಬರೋಬ್ಬರಿ 2.9 ಲಕ್ಷ ರೂ. ಸಂಗ್ರಹಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next