ಆಂಧ್ರಪ್ರದೇಶ: ಮಹಿಳೆಯೊಬ್ಬರ ಮನೆಗೆ ಬಂದಿರುವ ಪಾರ್ಸೆಲ್ ನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿರುವ ಭಯಾನಕ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಯಂಡಗಂಡಿ ಗ್ರಾಮದಲ್ಲಿ ಶುಕ್ರವಾರ(ಡಿ.20) ಬೆಳಿಗ್ಗೆ ಬೆಳಕಿಗೆ ಬಂದಿದೆ. ಘಟನೆಯಿಂದ ಮಹಿಳೆ ಶಾಕ್ ಗೆ ಒಳಗಾಗಿದ್ದಾರೆ.
ಏನಿದು ಘಟನೆ:
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಯಂಡಗಂಡಿ ಗ್ರಾಮದ ನಿವಾಸಿಯಾಗಿರುವ ನಾಗ ತುಳಸಿ ಅವರು ತಮ್ಮದೇ ಗ್ರಾಮದಲ್ಲಿ ಹೊಸ ಮನೆ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದರು ಅದರಂತೆ ಮನೆ ನಿರ್ಮಾಣಕ್ಕೆ ನೆರವು ನೀಡುವಂತೆ ಕ್ಷತ್ರಿಯ ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು ಮಹಿಳೆಯ ಅರ್ಜಿ ಸ್ವೀಕರಿಸಿದ ಸಮಿತಿ ಮಹಿಳೆಯ ಮನೆ ನಿರ್ಮಾಣಕ್ಕೆ ಬೇಕಾಗಿರುವ ಟೈಲ್ಸ್ ಹಾಗೂ ವಿದ್ಯುತ್ ಉಪಕರಣ ಕಳುಹಿಸಿಕೊಡುವ ಭರವಸೆ ನೀಡಿದ್ದರು ಅದರಂತೆ ಮೊದಲ ಭಾಗವಾಗಿ ಟೈಲ್ಸ್ ಗಳನ್ನು ಮಹಿಳೆಯ ಮನೆಗೆ ಪಾರ್ಸೆಲ್ ಮಾಡಿದ್ದರು ಉಳಿದ ವಿದ್ಯುತ್ ಉಪಕರಣಗಳನ್ನು ಸ್ವಲ್ಪ ಸಮಯದ ಬಳಿಕ ಕಳುಹಿಸಿ ಕೊಡುವುದಾಗಿ ಮಹಿಳೆಯ ಮೊಬೈಲ್ ಗೆ ಸಮಿತಿಯಿಂದ ಸಂದೇಶ ಕಳುಹಿಸಿತ್ತು.
ಇದಾದ ಕೆಲವು ಸಮಯದ ಬಳಿಕ ಅಂದರೆ ಬುಧವಾರ(ಡಿ.18) ಮಹಿಳೆಯ ಮೊಬೈಲ್ ವಾಟ್ಸ್‌ಆ್ಯಪ್ ನಂಬರ್ ಗೆ ಸಂದೇಶವೊಂದು ಬಂದಿದ್ದು ಅದರಲ್ಲಿ ಮನೆಗೆ ಬೇಕಾಗಿರುವ ಲೈಟ್‌ಗಳು, ಫ್ಯಾನ್‌ಗಳು, ಸ್ವಿಚ್ ಸೇರಿ ವಿದ್ಯುತ್ ಉಪಕರಣಗಳನ್ನು ಕಳುಹಿಸಿರುವುದಾಗಿ ಸಂದೇಶ ಬಂದಿತ್ತು ಅದೇ ರೀತಿ ಗುರುವಾರ ರಾತ್ರಿ ಮಹಿಳೆಯ ಮನೆಗೆ ಪಾರ್ಸೆಲ್ ಬಂದಿದೆ ಪಾರ್ಸೆಲ್ ಕೊಡುವ ವ್ಯಕ್ತಿ ಮನೆಯ ಒಳಗೆ ಪಾರ್ಸೆಲ್ ಬಾಕ್ಸ್ ಇರಿಸಿ ತೆರಳಿದ್ದಾನೆ, ರಾತ್ರಿಯಾಗಿದ್ದ ಕಾರಣ ಮಹಿಳೆ ಶುಕ್ರವಾರ ಬೆಳಿಗ್ಗೆ ಬಾಕ್ಸ್ ತೆರೆಯಲು ನಿಶ್ಚಯಿಸಿದ್ದರು ಅದರಂತೆ ಇಂದು(ಶುಕ್ರವಾರ) ಬೆಳಿಗ್ಗೆ ಬಾಕ್ಸ್ ತೆರೆದು ಯಾವೆಲ್ಲಾ ವಸ್ತುಗಳನ್ನು ಕಳುಹಿಸಿದ್ದಾರೆ ಎಂದು ನೋಡೋಣ ಎಂದು ಬಾಕ್ಸ್ ಓಪನ್ ಮಾಡಿದ ಮಹಿಳೆಗೆ ಶಾಕ್ ಆಗಿದೆ, ಬಾಕ್ಸ್ ತೆರೆಯುತ್ತಿದ್ದಂತೆ ಪಾರ್ಸೆಲ್ ಬಾಕ್ಸ್ ಒಳಗೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಇದನ್ನು ಕಂಡ ಮಹಿಳೆಗೆ ಒಮ್ಮೆ ಏನು ಮಾಡಬೇಕೆಂಬುದು ತಿಳಿಯದಂತಾಗಿದೆ ಕೆಲ ಹೊತ್ತಿನ ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾರೆ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಕ್ಸ್ ಪರಿಶೀಲನೆ ನಡೆಸಿದಾಗ ಮೃತದೇಹದ ಜೊತೆಗೆ ಪತ್ರವೊಂದು ಪತ್ತೆಯಾಗಿದೆ ಅದರಲ್ಲಿ 1.3 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾರ್ಸೆಲ್ ಎಲ್ಲಿಂದ ಬಂತು, ಅಲ್ಲದೆ ಮೃತ ವ್ಯಕ್ತಿ ಯಾರು ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ, ಪಕ್ಕದ ಜಿಲ್ಲೆಗಳ ಠಾಣೆಗಳಿಗೆ ಮಾಹಿತಿ ನೀಡಿ ಯಾರಾದರೂ ಕಾಣೆಯಾಗಿರುವ ಕುರಿತು ದೂರು ನೀಡಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಪಾರ್ಸೆಲ್ ನೀಡಿದ ವ್ಯಕ್ತಿಗಳನ್ನು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ