Advertisement

Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!

08:03 PM Dec 17, 2024 | Team Udayavani |

ಜಮ್ಶೆಡ್‌ಪುರ: ಟಾಟಾ ಉಕ್ಕು ಕಂಪನಿ ಮಂಗಳವಾರ ತನ್ನ ಕಾರ್ಯಾಚರಣೆಯಲ್ಲಿ ಅತ್ಯಂತ ಮಹತ್ವದ ಬದಲಾವಣೆ ಜಾರಿ ಮಾಡಿದೆ. ಜಾರ್ಖಂಡ್‌ನ‌ ನೋವಾಮುಂಡಿಯಲ್ಲಿರುವ ತನ್ನ ಕಬ್ಬಿಣದ ಗಣಿಯ ಸಂಪೂರ್ಣ ಕಾರ್ಯಾಚರಣೆಯನ್ನೇ ಮಹಿಳೆಯರಿಗೆ ವಹಿಸಿದೆ.

Advertisement

ಇದು ಇಡೀ ದೇಶದಲ್ಲೇ ಮೊದಲ ಪ್ರಯೋಗವೆನ್ನಿಸಿದೆ. ಅತ್ಯಂತ ಶ್ರಮದ ಕೆಲಸವಾಗಿರುವ ಗಣಿಯಲ್ಲಿ ಎಲ್ಲ ಕೆಲಸಗಳನ್ನು ಮಹಿಳೆಯರೇ ನಿರ್ವಹಿಸುವುದು ಸವಾಲಿನ ಕೆಲಸ. ಮಹಿಳೆಯರನ್ನು ಪುರುಷರಿಗೆ ಸಮಾನರನ್ನಾಗಿ ಸಿದ್ಧಪಡಿಸಬೇಕು ಎಂಬ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ಗಣಿಯಲ್ಲಿ ಭೂಮಿಯನ್ನು ಅಗೆಯುವ ವಾಹನಗಳನ್ನು ಚಲಾಯಿಸುವುದು, ಸಲಿಕೆಗಳಿಂದ ನೆಲವನ್ನು ಅಗೆಯುವುದು, ವಸ್ತುಗಳನ್ನು ಸಾಗಿಸುವುದು, ಕೊರೆಯುವುದು ಸೇರಿದಂತೆ ಎಲ್ಲ ಸಾಧನಗಳನ್ನು ಮಹಿಳೆಯರೇ ನಿರ್ವಹಿಸುತ್ತಾರೆ. ಸಾಮಾನ್ಯವಾಗಿ ಪುರುಷರೇ ನಿರ್ವಹಿಸುತ್ತಿದ್ದ ಈ ಕೆಲಸವನ್ನು ಈಗ ಮಹಿಳೆಯರಿಗೇ ಬಿಟ್ಟುಕೊಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next