Advertisement

ನ. 20 ರಿಂದ ಪಣಜಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ : ಅಪ್ಪುಗೆ ಶೃದ್ಧಾಂಜಲಿ

12:28 PM Nov 19, 2021 | Team Udayavani |

ಪಣಜಿ: ಇತ್ತೀಚೆಗಷ್ಟೇ ನಮ್ಮನ್ನಗಲಿದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ಶೃದ್ಧಾಂಜಲಿ ಸಲ್ಲಿಸಲಾಗುವುದು ಎಂದು ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದ ಸಂಚಾಲಕ ಚೈತನ್ಯಪ್ರಸಾದ್ ಮಾಹಿತಿ ನೀಡಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 20 ರಿಂದ ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯಲಿರುವ 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಖ್ಯಾತ ನಟಿ ಹೇಮಾಮಾಲಿನಿ ಉದ್ಘಾಟನೆ ನೆರವೇರಿಸಲಿದ್ದಾರೆ.

ಹೇಮಾಮಾಲಿನಿ ಹಾಗೂ ಗೀತ ರಚನೆಕಾರ ಪ್ರಸೂನ್ ಜೋಶಿ ರವರನ್ನು ‘ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್ ದ ಇಯರ್’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು

ಪ್ರಸಕ್ತ ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವ ಆಯೋಜನೆಗೆ 18 ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಮಹೋತ್ಸವದಲ್ಲಿ ಜಗತ್ತಿನ 63 ದೇಶಗಳ 148 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದೊಂದಿಗೆ ಪ್ರಸಕ್ತ ವರ್ಷ ಬ್ರಿಕ್ಸ ಚಿತ್ರಪಟ ಮಹೋತ್ಸವ ಆಯೋಜಿಸಲಾಗಿದೆ. ಈ ಮಹೋತ್ಸವದಲ್ಲಿ 12 ಪ್ರೀಮಿಯರ್, 26 ಏಷ್ಯಾ, 64 ಭಾರತೀಯ ಪ್ರೀಮಿಯರ್ ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಚೈತನ್ಯಪ್ರಸಾದ್ ಮಾಹಿತಿ ನೀಡಿದರು.

ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉಧ್ಘಾಟನಾ ಸಮಾರಂಭದ ನಂತರ ಕಿಂಗ್ ಆಫ್ ದ ವರ್ಡ ಚಲನಚಿತ್ರ ಪ್ರದರ್ಶನದೊಂದಿಗೆ ಚಲನಚಿತ್ರ ಪ್ರದರ್ಶನ ಆರಂಭಗೊಳ್ಳಲಿದೆ.

Advertisement

ನಮ್ಮನ್ನಗಲಿದ ಖ್ಯಾತ ನಟರಾದ ಸುಪ್ರಿತ್ ಭಾವೆ, ದಿಲೀಪಕುಮಾರ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಗುವುದು ಎಂದು ಚೈತನ್ಯಪ್ರಸಾದ್ ಮಾಹಿತಿ ನೀಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಗೋವಾ ನೋರಂಜನಾ ಸಂಸ್ಥೆಯ ಉಪಾಧ್ಯಕ್ಷ ಸುಭಾಷ ಫಳದೇಸಾಯಿ. ತಾರಿಕ್ ಥಾಮಸ್, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next