Advertisement

Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ

07:39 PM Dec 31, 2024 | Team Udayavani |

ಪಣಜಿ: 2024ರ ಆರಂಭದಲ್ಲಿ ಗೋವಾದಲ್ಲಿ ಸೂಚನಾ ಸೇಠ್ ಎಂಬವರು ಗೋವಾಕ್ಕೆ ಬಂದು ತನ್ನ ಮಗನನ್ನೇ ಕೊಂದ ಘಟನೆ ನಡೆದಿತ್ತು. ಇದೀಗ ವರ್ಷದ ಕೊನೆಯಲ್ಲಿ ಗೋವಾದ ಕಲಂಗುಟ್ ಬೀಚ್ ನಲ್ಲಿ ಪ್ರವಾಸಿಯೋರ್ವನ ಕೊಲೆ ನಡೆದಿದೆ.

Advertisement

ಆಂಧ್ರಪ್ರದೇಶ ಮೂಲದ ಬೋಲಾರವಿ (28) ಕೊಲೆಯಾದವನು. ಕಲಂಗುಟ್ ಬೀಚ್ ನಲ್ಲಿ ಡಿ.31ರ ಮಂಗಳವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ ಮತ್ತು ರೆಸ್ಟೊರೆಂಟ್ ನಲ್ಲಿದ್ದ ಮೂರು ಜನ ಕಾರ್ಮಿಕರನ್ನು ಕಲಂಗುಟ್ ಪೋಲಿಸರು ಬಂಧಿಸಿದ್ದಾರೆ. ಬಾರ್ ಮತ್ತು ರೆಸ್ಟೊರೆಂಟ್ ಮಾಲೀಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮೃತ ಬೋಲಾರವಿ ತನ್ನ ಕೆಲ ಸ್ನೇಹಿತರೊಂದಿಗೆ ಬಾರ್ ಮತ್ತು ರೆಸ್ಟೊರೆಂಟ್ ನಲ್ಲಿ ಊಟಕ್ಕೆ ಬಂದಿದ್ದರು. ಬಾರ್ ಮತ್ತು ರೆಸ್ಟೊರೆಂಟ್ ಬಂದ್ ಆದ ನಂತರ ಈತ ಕೆಲ ಪದಾರ್ಥಗಳ ಬೇಡಿಕೆ ಇಟ್ಟ ಎನ್ನಲಾಗಿದೆ. ಆದರೆ ಅಲ್ಲಿದ್ದ ಕಾರ್ಮಿಕರು ಈಗ ಮತ್ತೆ ಅಡುಗೆ ಸಿದ್ಧಪಡಿಸಲು ಸಾಧ್ಯವಿಲ್ಲ ಎಂದರು. ಇದರಿಂದಾಗಿ ಬಾರ್ ಮತ್ತು ರೆಸ್ಟೊರೆಂಟ್ ಕಾರ್ಮಿಕರು ಮತ್ತು ಪ್ರವಾಸಿಗನ ನಡುವೆ ಜಗಳ ಆರಂಭಗೊಂಡಿತು. ಅಲ್ಲಿದ್ದ ಕಾರ್ಮಿಕರು ಈ ಪ್ರವಾಸಿಗನ ಮೇಲೆ ಹಲ್ಲೆ ನಡೆಸಿದರು. ಗಂಭೀರವಾಗಿ ಗಾಯಗೊಂಡಿದ್ದ ಬೋಲಾರವಿ ನನ್ನು ಕಾಂದೋಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.

2024 ರ ಆರಂಭದಲ್ಲೂ ಕೊಲೆ ಪ್ರಕರಣ:

Advertisement

ಪ್ರಸಕ್ತ ವರ್ಷದ ಆರಂಭದಲ್ಲಿ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಸೂಚನಾ ಸೇಠ್ ತನ್ನ 5 ವರ್ಷದ ಮಗನನ್ನು ಗೋವಾದ ಹೋಟೆಲ್ ನಲ್ಲಿ ಕೊಲೆ ಮಾಡಿದ್ದಳು. ಗೋವಾದಿಂದ ಪರಾರಿಯಾಗುತ್ತಿದ್ದ ಈಕೆಯನ್ನು ಕರ್ನಾಟಕದಲ್ಲಿ ಪೋಲಿಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next