Advertisement
ಕರಾವಳಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ಎರಡು ದಿನಗಳ ಚಲನಚಿತ್ರೋತ್ಸವಕ್ಕೆ ಬಿಜೈ ಭಾರತ್ಮಾಲ್ನಲ್ಲಿ ಗುರುವಾರ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕರಾವಳಿ ಉತ್ಸವದಲ್ಲಿ ಚಲನಚಿತ್ರೋತ್ಸವವನ್ನು ನಡೆಸಲಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಿ ಹೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಲು ಅನುವಾಗುವಂತೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕೆಂಬ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.
Related Articles
Advertisement
ಮೊದಲನೇ ದಿನ ಅರಿಷಡ್ವರ್ಗ (ಕನ್ನಡ), 19.20.21 (ಕನ್ನಡ), ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ (ತುಳು), ಮಧ್ಯಂತರ (ಕನ್ನಡ) ಮತ್ತು ಕಾಂತಾರ ಕನ್ನಡ ಚಲನಚಿತ್ರ ಪ್ರದರ್ಶನಗೊಂಡಿತು.
ಭಾರತ್ ಸಿನಿಮಾದ ಚಿತ್ರಮಂದಿರದ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿ, ಸುಬ್ರಾಯ ಪೈ, ಅಪರ ಜಿಲ್ಲಾಧಿಕಾರಿ, ಜಿ. ಸಂತೋಷ್ ಕುಮಾರ್, ಉಪವಿಭಾಗಾಧಿ ಕಾರಿ ಹರ್ಷವರ್ಧನ್, ಯತೀಶ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಇಂದು ಯಾವೆಲ್ಲಾ ಚಲನಚಿತ್ರ ಪ್ರದರ್ಶನ?ಬಿಜೈ ಭಾರತ್ಮಾಲ್ನಲ್ಲಿ ಜ.3 ರಂದು ಬೆಳಗ್ಗೆ 10.15ಕ್ಕೆ ಸಾರಾಂಶ ಕನ್ನಡ ಚಲನಚಿತ್ರ, 12.45ಕ್ಕೆ ತರ್ಪಣ ಕೊಂಕಣಿ ಚಲನಚಿತ್ರ, ಮಧ್ಯಾಹ್ನ 3.15ಕ್ಕೆ ಶುದ್ಧಿ (ಕನ್ನಡ), 5.45ಕ್ಕೆ ಕುಬಿ ಮತ್ತು ಇಳಯ (ಕನ್ನಡ) ಮತ್ತು ರಾತ್ರಿ 8 ಗಂಟೆಗೆ ಗರುಡ ಗಮನ ವೃಷಭ ವಾಹನ (ಕನ್ನಡ) ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಈ ಎಲ್ಲ ಪ್ರದರ್ಶನ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ಸಿಗಲಿದೆ. ಕರಾವಳಿ ಉತ್ಸವದಲ್ಲಿ ಇಂದು
ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮ ಜ. 3ರಂದು ಸಂಜೆ 6ರಿಂದ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಇಲ್ಲಿನ ನೃತ್ಯಾಂಕುರಂ ಕಲಾತಂಡದಿಂದ ಸಾಂಸ್ಕೃತಿಕ ವೈವಿಧ್ಯ ಅನಂತರ ರಾತ್ರಿ 7.30ರಿಂದ ಮೂಡುಬಿದಿರೆ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸುವ ಯಕ್ಷಗಾನ ‘ನರ ಶಾರ್ದೂಲ’ ನಡೆಯಲಿದೆ.