Advertisement

ಪಾದೂರು ತೈಲ ಸಂಗ್ರಹಾಗಾರಕ್ಕೆ ಸೌದಿ ತೈಲ

03:45 AM Jan 26, 2017 | Team Udayavani |

ಹೊಸದಿಲ್ಲಿ: ಉಡುಪಿ ಸಮೀಪದ ಪಾದೂರಿನಲ್ಲಿ ನಿರ್ಮಿಸಲಾಗುತ್ತಿರುವ ಭೂಗತ ತೈಲ ಸಂಗ್ರಹಾಗಾರದ ಒಟ್ಟು ಸಾಮರ್ಥ್ಯದ ಶೇ. 50ರಷ್ಟನ್ನು ಭರ್ತಿ ಮಾಡಲು ಸೌದಿ ಅರೇಬಿಯ ಸರಕಾರ ಒಪ್ಪಿಕೊಂಡಿದೆ. ಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿರುವ ಸೌದಿ ರಾಜಕುಮಾರ ಶೇಖ್‌ ಅಹ್ಮದ್‌ ಬಿನ್‌ ಝಾಯೆದ್‌ ಅಲ್‌- ನಹ್ಯಾಮ್‌ ಅವರು ಪ್ರಧಾನಿ  ಮೋದಿ ಜತೆ ನಡೆಸಿದ ಸಭೆಯಲ್ಲಿ ಈ ಮಹತ್ವದ ಒಪ್ಪಂದಕ್ಕೆ  ಸಹಿ ಹಾಕಿದ್ದಾರೆ.

Advertisement

ಒಪ್ಪಂದದ ಪ್ರಕಾರ, ಅಬುಧಾಬಿಯ ರಾಷ್ಟ್ರೀಯ ತೈಲ ಕಂಪೆನಿ 6 ಮಿಲಿಯನ್‌ ಬ್ಯಾರೆಲ್‌ ತೈಲವನ್ನು ಪಾದೂರಿನ ಭೂಗತ ತೈಲ ಸಂಗ್ರಹಾಗಾರಕ್ಕೆ ಪೂರೈಸಲಿದೆ. ಇಲ್ಲಿ ಒಟ್ಟು 18.3 ಮಿ. ಬ್ಯಾರೆಲ್‌ ತೈಲ ಸಂಗ್ರಹಿಸಬಹುದು. ದೇಶದಲ್ಲಿ ಒಟ್ಟು 36.87 ಮಿಲಿಯನ್‌ ಬ್ಯಾರೆಲ್‌ ತೈಲ ಸಂಗ್ರಹ ಕೇಂದ್ರವಿದ್ದು, 10 ದಿನಗಳ ಬಳಕೆಗೆ ಸಾಕಾಗುತ್ತದೆ. 

ಭಾರತಕ್ಕೆ ತೈಲ ಪೂರೈಸುತ್ತಿರುವ ದೇಶಗಳಲ್ಲಿ ಸೌದಿ ಅರೇಬಿಯ 5ನೇ ಅತಿದೊಡ್ಡ ದೇಶ. ಭಾರತ ವಿಶ್ವದ ಮೂರನೇ ಅತಿದೊಡ್ಡ ತೈಲಗ್ರಾಹಕ.

Advertisement

Udayavani is now on Telegram. Click here to join our channel and stay updated with the latest news.

Next