Advertisement

Bangladesh: 42,600 ಕೋಟಿ ರೂ. ಲಂಚ ಕೇಸ್‌: ಹಸೀನಾ ವಿರುದ್ಧ ತನಿಖೆ ಶುರು

12:29 AM Dec 25, 2024 | Team Udayavani |

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾಗೆ ಒಂದಾದ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ಈಗ ರಷ್ಯಾ ಬೆಂಬಲಿತ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಸಂಬಂಧಿಸಿದಂತೆ  42,600 ಕೋಟಿ ರೂ. ಹಣಕಾಸು ದುರುಪಯೋಗ ಪ್ರಕರಣದಲ್ಲಿ ಶೇಖ್‌ ಹಸೀನಾ ಮತ್ತವರ ಕುಟುಂಬವೂ ಭಾಗಿಯಾಗಿದೆ ಎಂದು ಆರೋಪಿಸಿರುವ ಮಧ್ಯಾಂತರ ಸರಕಾರ, ಈ ಕುರಿತು ತನಿಖೆ ಆರಂಭಿಸಿದೆ.

Advertisement

ಹಸೀನಾ ಜತೆಗೆ ಅವರ ಪುತ್ರ ಸಜೀಬ್‌ ವಝೇದ್‌, ಸೋದರ ಸಂಬಂಧಿ ತುಲೀಪ್‌ ಸಿದ್ದೀಕ್‌ ವಿರುದ್ಧವೂ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಯಲಿದೆ. ಹಸೀನಾರ ರಾಜಕೀಯ ಪ್ರತಿಸ್ಪರ್ಧಿ, ನ್ಯಾಶನಲ್‌ ಡೆಮಾಕ್ರಾಟಿಕ್‌ ಮೂವ್‌ಮೆಂಟ್‌ ಪಾರ್ಟಿ ಮುಖ್ಯಸ್ಥ ಬಾಬ್ಬಿ ಹಜ್ಜಾಜ್‌ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿ, ಹಸೀನಾ ಕುಟುಂಬದ ವಿರುದ್ಧ ತನಿಖೆಗೆ ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next