ಯಂಗೊನ್: ಮ್ಯಾನ್ಮಾರ್‌ನಲ್ಲಿ ಸೇನೆಯ ವಿರುದ್ಧದ ಪ್ರತಿಭಟನೆಗಳು ತೀವ್ರಗೊಂಡಿದ್ದು, ಪ್ರತಿಭಟನಾಕಾರರ ಮೇಲೆ ಸೇನೆ ನಡೆಸಿರುವ ಗೋಲಿಬಾರ್‌ಗೆ ಈವರೆಗೆ 500ಕ್ಕೂ ಹೆಚ್ಚು ಸಾವು ಸಂಭವಿದೆ ಎಂದು ಅಸಿಸ್ಟನ್ಸ್ ಅಸೋಸಿಯೇಷನ್ ಫಾರ್ ಪೊಲಿಟಿಕಲ್ ಪ್ರಿಸನರ್ಸ್ (ಎಎಪಿಪಿ) ತಿಳಿಸಿದೆ.
ಮುಂದುವರಿದ ಗಲಭೆಗಳನ್ನು ಹತ್ತಿಕ್ಕಲು ಸೋಮವಾರದಂದು ಸೇನೆ ನಡೆಸಿದ ಗೋಲಿಬಾರ್‌ಗೆ 14 ಜನರು ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸಾವುಗಳ ಸಂಖ್ಯೆ 510ಕ್ಕೇರಿದೆ ಎಂದು ಸಂಸ್ಥೆ ತಿಳಿಸಿದೆ.
ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ: ಮ್ಯಾನ್ಮಾರ್‌ನ ದಂಗೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸುತ್ತಿರುವ ಅಲ್ಲಿನ ನಿರಾಶ್ರಿತರಿಗೆ ಮಾನವೀಯ ದೃಷ್ಟಿಯಿಂದ ವಸತಿ, ಊಟ ಹಾಗೂ ವೈದ್ಯಕೀಯ ಸೌಕರ್ಯಗಳನ್ನು ನೀಡುವುದಾಗಿ ಮಣಿಪುರ ಸರ್ಕಾರ ಪ್ರಕಟಿಸಿದೆ.
ಇದನ್ನೂ ಓದಿ :ಸಕಲೇಶಪುರ : ರೈಲು ಹಳಿಗಳ ಮೇಲೆ ಒಂಟಿಸಲಗ ಓಡಾಟ! ಜನರಲ್ಲಿ ಆತಂಕ
ಇತ್ತೀಚೆಗೆ, ಮ್ಯಾನ್ಮಾರ್ ನಿರಾಶ್ರಿತರಿಗೆ ಯಾವುದೇ ಸೌಲಭ್ಯ ನೀಡಕೂಡದೆಂದು ತಾವು ಹೊರಡಿಸಿದ್ದ ಆದೇಶವನ್ನು ಹಿಂಪಡೆಯುತ್ತಿರುವುದಾಗಿ ಸರ್ಕಾರ ತಿಳಿಸಿದೆ. ಈ ಬಗ್ಗೆ ವಿವರಣೆ ನೀಡಿರುವ ಮಣಿಪುರ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜ್ಞಾನ ಪ್ರಕಾಶ್, ನಿರಾಶ್ರಿತರಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಮಣಿಪುರದ ಇಂಫಾಲ್‌ನಲ್ಲಿ ಕಲ್ಪಿಸಲಾಗುವುದು ಎಂದಿದ್ದಾರೆ.