Advertisement

31000 ಕೋಟಿ ವೆಚ್ಚದಲ್ಲಿ ಭಾರತ-ಮ್ಯಾನ್ಮಾರ್‌ ಗಡಿಗೆ ಬೇಲಿ: ಕೇಂದ್ರ ಸರಕಾರ

01:45 AM Dec 10, 2024 | Team Udayavani |

ಹೊಸದಿಲ್ಲಿ: ನೆರೆಯ ದೇಶ ಮ್ಯಾನ್ಮಾರ್‌ ಗಡಿಗೆ ಬೇಲಿ ಹಾಕುವ ಅತೀ ದೊಡ್ಡ ಯೋಜನೆಯನ್ನು ಕೇಂದ್ರ ಸರಕಾರ ಕೈಗೆತ್ತಿಕೊಂಡಿದೆ. ಅದಕ್ಕಾಗಿ 31 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಮ್ಯಾನ್ಮಾರ್‌ ಜತೆ ಭಾರತ 1,643 ಕಿ.ಮೀ. ಗಡಿ ಹಂಚಿಕೊಂಡಿದ್ದು, ಈ ಪೈಕಿ ಸದ್ಯ 30 ಕಿ.ಮೀ.ಗಡಿಗೆ ಮಾತ್ರ ಬೇಲಿ ಇದೆ. ಈ ಪೈಕಿ 300 ಕಿ.ಮೀ. ಉದ್ದ ವಿದ್ಯುತ್‌ ಬೇಲಿಯನ್ನೂ ನಿರ್ಮಿಸಲಾಗುತ್ತದೆ. ಬಾರ್ಡರ್‌ ರೋಡ್‌ ಆರ್ಗನೈಸೇಶನ್‌ ಅದರ ನಿರ್ಮಾಣ ಕಾರ್ಯ ನಡೆಸುತ್ತಿದ್ದು, 10 ವರ್ಷಗಳಲ್ಲಿ ಕಾಮಗಾರಿ ಮುಕ್ತಾಯವಾಗುವ ನಿರೀಕ್ಷೆ ಇದೆ. ಅರುಣಾಚಲ ಪ್ರದೇಶ, ಮಿಜೋ ರಾಂ, ಮಣಿಪುರ, ನಾಗಾಲ್ಯಾಂಡ್‌ ವ್ಯಾಪ್ತಿಯಲ್ಲಿ ಮ್ಯಾನ್ಮಾರ್‌ ಗಡಿ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next