Advertisement

South Korea; ಮಿಲಿಟರಿ ಆಡಳಿತ ಹೇರಿ ಅಧಿಕಾರ ಕಳೆದುಕೊಂಡ ಅಧ್ಯಕ್ಷ!

12:18 PM Dec 15, 2024 | Team Udayavani |

ಸಿಯೋಲ್‌: ದೇಶದಲ್ಲಿ ಮಿಲಿಟರಿ ಆಡಳಿತ ಹೇರಿದ್ದ­ಕ್ಕಾಗಿ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್‌ ಸುಕ್‌ ಯಿಯೋಲ್‌ ಅವರು ತಮ್ಮ ಅಧಿ ಕಾರ ಕಳೆದುಕೊಂಡಿ­ದ್ದಾರೆ. ಶೀಘ್ರವೇ ಅವರ ಸ್ಥಾನಕ್ಕೆ ಪ್ರಧಾನಿ ಹ್ಯಾನ್‌ ಡಕ್‌-ಸೂ ಅವರನ್ನು ನೇಮಕ ಮಾಡಲಾಗುತ್ತದೆ.

Advertisement

ಕೊರಿಯಾ ಸಂಸತ್ತು ಯಿಯೋಲ್‌ ವಿರುದ್ಧ ಮಂಡಿ­ಸಿದ್ದ ವಾಗ್ಧಂಡನೆ ಗೊತ್ತುವಳಿಗೆ ಶನಿ­ವಾರ ಮತದಾನ ನಡೆದಿದ್ದು, ಯಿಯೋಲ್‌ ವಿರುದ್ಧ 204 ಮತಗಳು, ಪರವಾಗಿ 85 ಮತಗಳು ಚಲಾವಣೆ­ಯಾ­ಗಿವೆ. ಹೀಗಾಗಿ ಶೀಘ್ರದಲ್ಲೇ ಯಿಯೋಲ್‌ ಅಧಿ­ಕಾರ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಯಿಯೋಲ್‌ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ 180 ದಿನಗಳೊಳಗೆ ಕೋರ್ಟ್‌ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದ್ದು, ಬಳಿಕ 60 ದಿನದೊಳಗೆ ಹೊಸ ಅಧ್ಯಕ್ಷರ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next