Advertisement

ಅಧಿಕಾರಿಗಳ ಗೈರು: ದಲಿತ ಮುಖಂಡರ ಆಕ್ರೋಶ

03:34 PM Apr 01, 2022 | Team Udayavani |

ಸುರಪುರ: ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ದಲಿತರಿಗೆ ಮಾತ್ರವಲ್ಲ ಎಲ್ಲಾ ಸಮಾಜದವರಿಗೆ ಅಗತ್ಯವಾಗಿದ್ದಾರೆ. ಕೇವಲ ದಲಿತರನ್ನು ಕರೆದು ಸಭೆ ಮಾಡುವುದರಲ್ಲಿ ಅರ್ಥವಿಲ್ಲ. ಸರಕಾರವೇ ಈ ರೀತಿ ಮಾಡಿದರೆ ಹೇಗೆ? ಮೇಲಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದಾರೆ. ಇತರೆ ಸಮಾಜದವವರು, ವಿವಿಧ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿ ಸಭೆ ಮಾಡಿ ಸದ್ಯಕ್ಕೆ ಸಭೆ ಮುಂದೂಡುವಂತೆ ದಲಿತ ಮುಖಂಡರು ಒತ್ತಾಯಿಸಿದರು.

Advertisement

ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಗುರುವಾರ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರ ಕೋರಿಕೆ ಮೇರೆಗೆ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಸಭೆ ಮುಂದೂಡುವುದಾಗಿ ತಿಳಿಸಿದರು.

ಗ್ರೇಡ್‌-2 ತಹಶೀಲ್ದಾರ್‌ ಮಲ್ಲಯ್ಯ, ತಾಪಂ ಇಒ ಅಮರೇಶ, ಪಿಐ ಸುನೀಲ್‌ ಕುಮಾರ ಮೂಲಿಮನಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ, ಸಿಡಿಪಿಒ ಲಾಲ್‌ ಸಾಬ್‌ ಪೀರಾಪುರ, ಎಸ್‌ಟಿಒ ಡಾ| ಮೋನಪ್ಪ ಸಿರವಾಳ, ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ಮೊಹ್ಮದ್‌ ಸಲೀಂ, ಅಲ್ಪಸಂಖ್ಯಾತರ ಇಲಾಖೆ ಸಂಗೀತಾ ಮಾಡ್ಯಾಳ, ದಲಿತ ಮುಖಂಡರಾದ ನಾಗಣ್ಣ ಕಲ್ಲದೇವನಹಳ್ಳಿ, ಮಾನಪ್ಪ ಕಟ್ಟಿಮನಿ, ವೆಂಕಟೇಶ ಹೊಸ್ಮನಿ, ಭೀಮರಾಯ ಸಿಂದಗೇರಿ, ಶಿವಲಿಂಗ ಹಸನಾಪುರ, ರಾಹುಲ್‌ ಹುಲಿಮನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next