Advertisement

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

04:58 AM Dec 19, 2024 | Team Udayavani |

ಬಂಟ್ವಾಳ: ಪಂಜಿಕಲ್ಲು ಗ್ರಾಮದ ಕಂಬಲ್ದಡ್ಡದ ಮನೆಯೊಂದ ರಲ್ಲಿ ನಡೆಯುತ್ತಿದ್ದ ಕಳ್ಳಬಟ್ಟಿ ತಯಾರಿ ಅಡ್ಡೆಗೆ ಬುಧವಾರ ದಾಳಿ ನಡೆಸಿದ ಬಂಟ್ವಾಳ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿ ಕಳ್ಳಬಟ್ಟಿ ಹಾಗೂ ಅದಕ್ಕೆ ಬಳಸುತ್ತಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ರುಕ್ಮಯ ಪೂಜಾರಿಯ ಮನೆಯಲ್ಲಿ ಕಳ್ಳಬಟ್ಟಿ ದಂಧೆ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತ ಹಾಗೂ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನ ಹಾಗೂ ಬಂಟ್ವಾಳ ಉಪ ವಿಭಾಗದ ಉಪ ಅಧೀಕ್ಷಕರ ನಿರ್ದೇಶನದಲ್ಲಿ ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕ ಲಕ್ಷ್ಮಣ್‌ ಶಿವಣಗಿ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕ ರಾಜ ನಾಯ್ಕ ತಂಡ ದಾಳಿ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next