Advertisement

ಐರ್ಲೆಂಡ್ ಎದುರು 35 ರನ್ ಗೆಲುವು : ಸೆಮಿ ಫೈನಲ್ ಗೆ ಲಗ್ಗೆ ಇಟ್ಟ ನ್ಯೂಜಿಲ್ಯಾಂಡ್

04:23 PM Nov 04, 2022 | Team Udayavani |

ಅಡಿಲೇಡ್: ಟಿ20 ವಿಶ್ವಕಪ್ ಪಂದ್ಯಾವಳಿಯ ಶುಕ್ರವಾರ ನಡೆದ ಸೂಪರ್ 12 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಐರ್ಲೆಂಡ್ ಎದುರು 35 ರನ್ ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.

Advertisement

ಗೆಲುವಿನೊಂದಿಗೆ ಗ್ರೂಪ್ 1 ರಲ್ಲಿ ನ್ಯೂಜಿಲ್ಯಾಂಡ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಯಿತು. ಇನ್ನೊಂದು ತಂಡಕ್ಕಾಗಿ ಹೊಸ ಲೆಕ್ಕಾಚಾರಗಳನ್ನು ಮಾಡಲಾಗುತ್ತಿದೆ.

ಐರ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭರ್ಜರಿ ಆಟವಾಡಿದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಪಂದ್ಯ ಶ್ರೇಷ್ಠ ಎನಿಸಿಕೊಂಡರು.ಅವರು 35 ಎಸೆತಗಳಲ್ಲಿ 61 ರನ್ ಕೊಡುಗೆ ಸಲ್ಲಿಸಿದರು.

ಇದನ್ನೂ ಓದಿ : ಟಿ20 ವಿಶ್ವಕಪ್: ಕಿವೀಸ್ ವಿರುದ್ಧ ಹ್ಯಾಟ್ರಿಕ್ ಪಡೆದ ಐರಿಷ್ ವೇಗಿ ಲಿಟಲ್

ಸಂಕ್ಷಿಪ್ತ ಸ್ಕೋರುಗಳು:

Advertisement

ನ್ಯೂಜಿಲ್ಯಾಂಡ್ : 185/6 (ಕೇನ್ ವಿಲಿಯಮ್ಸನ್ 61, ಡೇರಿಲ್ ಮಿಚೆಲ್ 31*; ಜೋಶುವಾ ಲಿಟಲ್ 3/22)

ಐರ್ಲೆಂಡ್ : 150/9 (ಪಾಲ್ ಸ್ಟಿರ್ಲಿಂಗ್ 37, ಆಂಡ್ರ್ಯೂ ಬಾಲ್ಬಿರ್ನಿ 30, ಲಾಕಿ ಫರ್ಗುಸನ್ 3/22)

Advertisement

Udayavani is now on Telegram. Click here to join our channel and stay updated with the latest news.

Next