Advertisement

ಹೊಸ ಬಸ್‌ ನಿಲ್ದಾಣಕ್ಕೆವಾಯವ್ಯ ಸಾರಿಗೆ ಅಧ್ಯಕ್ಷರ ಭೇಟಿ

10:32 AM May 12, 2020 | Suhan S |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ಸೋಮವಾರ ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ, ನಗರದಲ್ಲಿ ಸಿಲುಕಿಕೊಂಡಿರುವ ವಲಿಸಗರು ತಮ್ಮ ತವರು ರಾಜ್ಯಗಳಿಗೆ ತೆರಳಲು ಸಂಸ್ಥೆಯಿಂದ ಆರಂಭಿಸಿರುವ ಸಹಾಯವಾಣಿ ಹಾಗೂ ಬಸ್‌ ಗಳ ಕಾರ್ಯಾಚರಣೆ ಪರಿಶೀಲಿಸಿದರು.

Advertisement

ಕರಾರು ಒಪ್ಪಂದದ ಎರಡು ಬಸ್ಸುಗಳಲ್ಲಿ 47 ವಲಸಿಗರನ್ನು ಸೋಮವಾರ ರಾಜಸ್ಥಾನಕ್ಕೆ ಕಳಿಸಲು ಕ್ರಮ ಕೈಗೊಳ್ಳಲಾಗಿದೆ. ಸಾವಿರಾರು ಕಿ.ಮೀ ಕ್ರಮಿಸಬೇಕಾಗಿದ್ದರಿಂದ ಹೊಸ ಬಸ್ಸುಗಳೊಂದಿಗೆ ಮಾರ್ಗದ ಮಾಹಿತಿ ಇರುವ ಹಾಗೂ ಹಿಂದಿ ಭಾಷೆ ಬಲ್ಲ ಇಬ್ಬರು ಅನುಭವಿ ಚಾಲಕರನ್ನು ನಿಯೋಜಿಸಲಾಗಿದೆ. ಈ ವರೆಗೆ ಹುಬ್ಬಳ್ಳಿಯಿಂದ ಎಂಟು ಬಸ್ಸುಗಳಲ್ಲಿ ಒಟ್ಟು 192 ಕಾರ್ಮಿಕರು ರಾಜಸ್ಥಾನದ ತಮ್ಮ ಮೂಲ ಸ್ಥಳಗಳಿಗೆ ತೆರಳಿದಂತಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ್‌, ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಮಾಹಿತಿ ನೀಡಿದರು.

ಅಧ್ಯಕ್ಷ ವಿ.ಎಸ್‌. ಪಾಟೀಲ ಮಾತನಾಡಿ, ಕರ್ತವ್ಯದ ಸಮಯದಲ್ಲಿ ಸಿಬ್ಬಂದಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಬಸ್ಸುಗಳ ಶುಚಿತ್ವ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿಗಾವಹಿಸಬೇಕು. ಎಲ್ಲ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಕಡ್ಡಾಯವಾಗಿ ಮಾಸ್ಕ್, ಕೈ ಗವಸು, ಸ್ಯಾನಿಟೈಸರ್‌ ಬಳಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತೆಯಿಂದ ಪ್ರಯಾಣ ಮಾಡುವಂತೆ ಅಗತ್ಯ ತಿಳಿವಳಿಕೆ ನೀಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಾರ್ಜಜನಿಕ ಸಾರಿಗೆ ಪುನರಾರಂಭಿಸಲು ಸರ್ಕಾರದಿಂದ ಆದೇಶ ಬಂದ ಕೂಡಲೇ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಬಸ್ಸುಗಳ ಸಂಚಾರ ಪುನರಾರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next