Advertisement

ಸೀಲ್‌ಡೌನ್‌ ನಿಯಮ ಉಲ್ಲಂಘನೆ ಬೇಡ

12:12 PM Aug 05, 2020 | Suhan S |

ಮಾಗಡಿ: ಸೀಲ್‌ಡೌನ್‌ ಏರಿಯಾದಲ್ಲಿರುವವರು ಕೋವಿಡ್‌-19 ನಿಯಮ ಉಲ್ಲಂಘಿಸಿದರೆ ಸೋಂಕಿತರ ಸಂಖ್ಯೆಯೂ ಹೆಚ್ಚಲಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಎಂ.ಎನ್‌.ಮಹೇಶ್‌ ತಿಳಿಸಿದರು.

Advertisement

ಪಟ್ಟಣದ ತಿರುಮಲೆ ಚೌಡೇಶ್ವರಿ ಗುಡಿ ಬೀದಿಗೆ ಕೋವಿಡ್ ವಾರಿಯರ್ಸ್ ಗಳೊಂದಿಗೆ ಭೇಟಿ ನೀಡಿ ಮಾತನಾಡಿದರು. ಪಟ್ಟಣ ಸೇರಿ ತಿರುಮಲೆ ಚೌಡೇಶ್ವರಿ ಬೀದಿ ನಿವಾಸಿಗಳಲ್ಲಿ ಪಾಸಿಟಿವ್‌ ಪ್ರಕರಣ ಬಂದಿದ್ದು, ಆ ಏರಿಯಾವನ್ನು ಸೀಲ್‌ಡೌನ್‌ ಮಾಡಿದ್ದರೂ ಜನ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆಂದರು. ಜನರು ಜಾಗೃತರಾಗದ ಹೊರತು ಸೋಂಕು ಕಡಿಮೆಯಾಗುವುದಿಲ್ಲ, ಸೀಲ್‌ಡೌನ್‌ ಏರಿಯಾಗೆ ಪುರಸಭೆ ಪೌರಕಾರ್ಮಿಕರನ್ನು ನೇಮಕ ಮಾಡಿದ್ದು, ಆಯಾ ಮನೆ ಕುಟುಂಬಸ್ಥರು ತಮಗೆ ಬೇಕಾದ ಅಗತ್ಯ ವಸ್ತು ತರಿಸಿಕೊಳ್ಳಬಹುದು, ನಾಗರಿಕರು ಯಾವುದೇ ಕಾರಣಕ್ಕೂ ಸೀಲ್‌ಡೌನ್‌ ಉಲ್ಲಂಘಟನೆ ಮಾಡದಂತೆ ಪ್ರಚಾರಗೊಳಿಸಿದರು.

ತಾಲೂಕು ಆರೋಗ್ಯ ಇಲಾಖೆ ಆಡಳಿತಾಧಿಕಾರಿ ಡಾ.ರಾಜೇಶ್‌, ಕೆಮ್ಮು ನೆಗಡಿ, ಗಂಟಲು ನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಅದು ಕೋವಿಡ್ ಸೋಂಕು ಇರಬಹುದು. ಕೂಡಲೇ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಆರೋಗ್ಯ ಶಿಕ್ಷಣಾಧಿಕಾರಿ ಆರ್‌.ರಂಗನಾಥ್‌, ಪುರಸಭೆ ಆರೋಗ್ಯ ನಿರೀಕ್ಷಕರು, ಸಿಬ್ಬಂದಿ, ಪೌರಕಾರ್ಮಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next