Advertisement
ತಾಲೂಕಿನ ಚಾಕಹಳ್ಳಿ ಬಳಿ ಜೋಳ ಬೆಳೆದಿದ್ದ ಹೊಲದಲ್ಲಿ ಅಂದಾಜು ಒಂದೂವರೆ ವರ್ಷದ ಹುಲಿ ಮರಿ ಕಳೇಬರ ಪತ್ತೆಯಾಗಿದೆ. ಇಲಾಖೆ ಅಧಿಕಾರಿಗಳು ಹೇಳು ವಂತೆ ಆ ಪ್ರದೇಶದಲ್ಲಿ ತಾಯಿ ಹುಲಿಯೊಂದಿಗೆ ಒಂದೂವರೆ ವರ್ಷದ 2 ಹುಲಿ ಮರಿಗಳು ಬೀಡು ಬಿಟ್ಟಿದ್ದವು. ಬೇರೊಂದು ಗಂಡು ಹುಲಿ ಆ ಸ್ಥಳಕ್ಕೆ ಬಂದು 1 ಮರಿಯನ್ನು ಕೊಂದು ಭಕ್ಷಿಸಿದೆ. ಈ ಕುರಿತು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ನಾಗರಹೊಳೆ ವನ್ಯಜೀವಿ ಪಶು ವೈದ್ಯಾಧಿಕಾರಿ ಡಾ. ಮುಜಿಬ್ ರೆಹಮಾನ್ ಡಾ. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಹಲವು ದಿನಗಳಿಂದ ಪಟ್ಟಣ ವ್ಯಾಪ್ತಿಯ ಹಾಗೂ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಲಿ ಮತ್ತು ಮರಿಹುಲಿಗಳು ನಿರಂತರವಾಗಿ ಓಡಾಡುತ್ತಿದ್ದು ರೈತರಿಗೆ ಕಾಣಿಸಿಕೊಂಡು ಭೀತಿ ಉಂಟು ಮಾಡಿತ್ತು. ಪಟ್ಟಣ ವ್ಯಾಪ್ತಿಯಲ್ಲೇ ಮೃತಪಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಡಿಸಿಎಫ್ ಬಸವರಾಜು, ಎಸಿಎಫ್ ಅಭಿಷೇಕ್, ಆರ್ ಎಫ್ ಓ ಹನುಮಂತರಾಜು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹುಲಿ ಮೃತಪಟ್ಟಿರುವ ಸ್ಥಳಕ್ಕೆ ಭಾನುವಾರ ವನ್ಯಜೀವಿ ವಿಭಾಗದ ಡಿಸಿಎಫ್ ಸೀಮಾ ಮತ್ತಿತರ ಅಧಿಕಾರಿಗಳು ಭೇಟಿ ನೀಡಲಿದ್ದಾರೆ.