Advertisement
ಎನ್ಕೌಂಟರ್ ಘಟನೆಯು ಕಬ್ಬಿನಾಲೆ ಪರಿಸರದಿಂದ 8 ಕಿ. ಮೀ. ಎತ್ತರದ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಾರ್ಯಾಚರಣೆ ಹೇಗೆ ನಡೆದಿದೆ, ದಾಳಿ-ಪ್ರತಿದಾಳಿ ಹೇಗಾಯಿತು, ಉಳಿದವರು ಗಾಯ ಗೊಂಡಿದ್ದಾರೆಯೇ ಮೊದಲಾದ ಆಯಾಮದಲ್ಲಿ ತನಿಖೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಹೇಳಿಕೆ ಪ್ರಕಾರ, ಕಾರ್ಯಾಚರಣೆ ವೇಳೆ ಮೂರ್ನಾಲ್ಕು ಮಂದಿ ನಕ್ಸಲರು ಇದ್ದು, ಅವರು ಕಾಡಿನ ನಡುವೆ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಎಎನ್ಎಫ್ ಸಿಬಂದಿ ಪಶ್ಚಿಮಘಟ್ಟದ ಎಲ್ಲ ಕಾಡಂಚಿನ ಭಾಗದ ಮೂಲೆಮೂಲೆಯನ್ನು ಜಾಲಾಡುತ್ತಿರುವಾಗ ತಪ್ಪಿಸಿಕೊಂಡವರು ಯಾವ ಕಡೆಗೆ ಪರಾರಿಯಾಗಿರಬಹುದು ಎಂಬ ಕುತೂಹಲವೂ ಎಲ್ಲರಲ್ಲೂ ಇದೆ.
Related Articles
ಪಶ್ಚಿಮಘಟ್ಟದ ಕಾಡಂಚಿನ ಗ್ರಾಮೀಣ ಭಾಗದಲ್ಲಿ ಶೋಧ ಕಾರ್ಯಾ ಚರಣೆ ಚುರುಕು ಪಡೆದಿದ್ದು, ಎಎನ್ಎಫ್ ಪಡೆ ಮತ್ತು ಶ್ವಾನ ಪಡೆಯ ಸಹಕಾರದೊಂದಿಗೆ ಶೋಧ ನಡೆಯುತ್ತಿದೆ.
Advertisement
ಕಾರ್ಕಳ, ಹೆಬ್ರಿ, ಕುಂದಾಪುರ ಹಾಗೂ ದ. ಕ. ಜಿಲ್ಲೆ ಗಡಿ ಭಾಗದಲ್ಲಿ ಶೋಧ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೆಬ್ರಿ ಪರಿಸರದಲ್ಲಿ ಎಎನ್ಎಫ್ ಹದ್ದಿನ ಕಣ್ಣಿರಿಸಿದ್ದು, ಕಬ್ಬಿನಾಲೆ ಸುತ್ತಮುತ್ತ ನಿರಂತರ ಗಸ್ತು ಕಾರ್ಯ ಮುಂದುವರಿದಿದೆ.
ಮುಂದುವರಿದ ಕಾರ್ಯಾಚರಣೆ, ಸ್ಥಳಕ್ಕೆ ನ್ಯಾಯಾಧೀಶೆ ಭೇಟಿಹೆಬ್ರಿ: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಪೀತುಬೈಲಿನಲ್ಲಿ ನಡೆದ ನಕ್ಸಲ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಕಾರ್ಕಳ ಪಿಸಿಜೆ ಕೋರ್ಟ್ನ ನ್ಯಾಯಾಧೀಶೆ ಕೋಮಲಾ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಮುಂದುವರಿದ ಕೂಂಬಿಂಗ್
ಈ ನಡುವೆ ಗುರುವಾರ ಬೆಳಗ್ಗಿನಿಂದ ನಾಡಾ³ಲು ಗ್ರಾಮದ ಪೀತುಬೈಲ್,ತಿಂಗಳಮಕ್ಕಿ, ಮುದ್ರಾಡಿ ಗ್ರಾಮದ ಕಬ್ಬಿನಾಲೆ, ಮತ್ತಾವು ಸುತ್ತಮುತ್ತ ಹಾಗೂ ಘಟನಾ ಸ್ಥಳಗಳಲ್ಲಿ ಎಎನ್ಎಫ್ ಸಿಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ವಿಕ್ರಮ ಗೌಡನೊಂದಿಗೆ ಇದ್ದ ಸಹಚರರ ಪತ್ತೆಗೆ ಡ್ರೋನ್ ಕೆಮರಾ ಮೂಲಕ ಪರಿಶೀಲನೆ ಹಾಗೂ ಪೊಲೀಸ್ ಶ್ವಾನದಳದೊಂದಿಗೆ ಶೋಧ ನಡೆಸಿದರು. ಸ್ಥಳದಲ್ಲಿ ಗುರುವಾರವೂ ಬಿಗು ಭದ್ರತೆ ಮುಂದುವರಿದಿದೆ. ಯಾಕೆ ಹೀಗಾದ?
ಎನ್ಕೌಂಟರ್ಗೆ ಬಲಿಯಾದ ವಿಕ್ರಮ ಗೌಡ ಕುರಿತು ಕಬ್ಬಿನಾಲೆ ಹಾಗೂ ತಿಂಗಳಮಕ್ಕಿ ಸುತ್ತಮುತ್ತಲಿನ ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಆತ ತುಂಬಾ ಮೃದು ಸ್ವಭಾವದವನಾಗಿದ್ದ. ಯಾಕೆ ಹೀಗಾದ ಎಂದು ತಿಳಿಯುತ್ತಿಲ್ಲ. ಅವನ ಮನೆಯವರೆಲ್ಲ ತುಂಬ ಒಳ್ಳೆಯವರು. ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಆತನ ಬದುಕು ಈ ರೀತಿ ಅಂತ್ಯಗೊಂಡಿರುವುದು ಬೇಸರ ತಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸಂಪಾಜೆ: ನಕ್ಸಲರಿಗಾಗಿ ತಪಾಸಣೆ
ಅರಂತೋಡು: ನಕ್ಸಲ್ ಮುಖಂಡ ವಿಕ್ರಂ ಗೌಡ ಹತ್ಯೆ ನಡೆದ ಹಿನ್ನೆಲೆಯಲ್ಲಿ , ಆತನ ಜತೆಯಲ್ಲಿದ್ದ ನಕ್ಸಲರು ಪರಾರಿಯಾಗುವ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯ ಗಡಿಪ್ರದೇಶವಾದ ಸಂಪಾಜೆ ಅರಣ್ಯ ಚೆಕ್ಪೋಸ್ಟ್ನಲ್ಲಿ ಪೊಲೀಸರು ವಾಹನಗಳನ್ನು ನಿಲ್ಲಿಸಿ, ತಪಾಸಣೆ ಮಾಡುತ್ತಿದ್ದಾರೆ.