Advertisement

Davanagere:ಪ್ರತಿಷ್ಠಿತ ಬಡಾವಣೆಯ ಪಹಣಿಯಲ್ಲಿಯೂ ವಕ್ಫ್ ಹೆಸರು!

08:08 PM Nov 09, 2024 | Team Udayavani |

ದಾವಣಗೆರೆ: ರಾಜ್ಯದ ವಿವಿಧೆಡೆ ರೈತರ ಜಮೀನು, ಮಠ, ಮಂದಿರಗಳು ವಕ್ಫ್ ಹೆಸರಿಗೆ ನೋಂದಣಿಯಾಗಿರುವ ಪ್ರಕರಣಗಳು ಹೊರಬೀಳುತ್ತಿದ್ದಂತೆ ದಾವಣಗೆರೆ ಮಹಾನಗರದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಬಡಾವಣೆಯ ಪಹಣಿಯಲ್ಲಿಯೂ ವಕ್ಫ್ ಹೆಸರು ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ.

Advertisement

ನಗರದ ಎ.ವಿ.ಕೆ. ಕಾಲೇಜು ರಸ್ತೆಯ ಪಿ.ಜೆ. ಬಡಾವಣೆಯ ಸರ್ವೇ ನಂಬರ್ 53 ರಲ್ಲಿನ ನಾಲ್ಕು ಎಕರೆ 13 ಗುಂಟೆ ಪ್ರದೇಶ ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಲ್ಲಿ 2015 ರಲ್ಲಿ ನೋಂದಣಿಯಾಗಿರುವುದು ಈಗ ಬಹಿರಂಗಗೊಂಡಿದೆ.

ನಗರದ ಪ್ರತಿಷ್ಠಿತ ಈ ಬಡಾವಣೆ ಬಹಳ ಹಳೆಯ ಬಡಾವಣೆಯಾಗಿದ್ದು ಮೈಸೂರು ಅರಸರ ಗೌರವಾರ್ಥ ಪ್ರಿನ್ಸ್ ಜಯಚಾಮರಾಜೇಂದ್ರ ಹೆಸರಿಡಲಾಗಿದೆ. 1950 ಕ್ಕಿಂತ ಹಿಂದೆಯೇ ಈ ಜಾಗೆಯನ್ನು ಸ್ಥಳೀಯ ಸಂಸ್ಥೆಗಳಿಂದ ಬಡವರಿಗೆ ನಿವೇಶನವಾಗಿ ನೀಡಿದ್ದು ಮಹಾನಗರ ಪಾಲಿಕೆಯಿಂದ ಮನೆ ನಂಬರ್ ನೀಡಲಾಗಿದೆ. ಪ್ರತಿಯೊಬ್ಬರ ಹೆಸರಲ್ಲಿ ಆಸ್ತಿಯ ದಾಖಲೆ ಪಾಲಿಕೆಯಲ್ಲಿದೆ. ಇಲ್ಲಿ ಮೂರ್‍ನಾಲ್ಕು ತಲೆಮಾರುಗಳಿಂದ ಜನರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. 2015 ರಲ್ಲಿ ಸ್ಥಳ ಪರಿಶೀಲಿಸದೇ ಅಧಿ ಕಾರಿಗಳು ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಲ್ಲಿ ನೋಂದಣಿ ಮಾಡಿದ್ದು ಬಡಾವಣೆಯ ನೂರಾರು ಜನರು ಆತಂಕಕ್ಕೊಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next