Advertisement
ಪದವಿಯ ನಂತರ ಸ್ನಾತಕೋತ್ತರ ಪದವಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯಾ ವಿಭಾಗಗಳಲ್ಲಿ ಮಾಡಲಾಗುತ್ತದೆ. ಪದವಿಯಲ್ಲಿ ಗಳಿಸಿದ ಅಂಕ, ಮೀಸಲಾತಿ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕದ ಆಧಾರದಲ್ಲಿ ಮೆರಿಟ್ ಲಿಸ್ಟ್ ಪ್ರಕಟಿಸಲಾಗುತ್ತದೆ. ಅದರಂತೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿ, ದಾಖಲಾತಿ ಪ್ರಕ್ರಿಯೆ ನಡೆಸಲಾಗುತಿತ್ತು. ಆದರೆ,2020-21ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ದಾಖಲಾತಿ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವುದರಿಂದ ಪ್ರವೇಶ ಪರೀಕ್ಷೆ ಬದಲಿಗೆ, ಕೇವಲ ಪದವಿ ಅಂಕಗಳ ಆಧಾರದಲ್ಲಿ ರೋಸ್ಟರ್ ಪದ್ಧತಿ ಅನುಸಾರ ಸೀಟು ಹಂಚಿಕೆಗೆ ಬೆಂವಿವಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಸರ್ಕಾರದ ಅನುಮತಿ ಅಗತ್ಯ : ಬೆಂವಿವಿ ವ್ಯಾಪ್ತಿಯಲ್ಲಿ ಪ್ರಥಮ ವರ್ಷದ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಅಂತಿಮ ವರ್ಷದ ಪದವಿ ಪರೀಕ್ಷೆಗಳು ಅಂತಿಮ ಹಂತದಲ್ಲಿದ್ದು, ಫಲಿತಾಂಶದ ನಂತರ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಆದರೆ, ಪದವಿ ಅಥವಾ ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಲು ಸರ್ಕಾರದ ಅನುಮತಿ ಬೇಕು. ಸರ್ಕಾರದ ಅನುಮತಿಯಿಲ್ಲದೇ ತರಗತಿ ನಡೆಸಲು ಸಾಧ್ಯವಿಲ್ಲ. ಆನ್‌ಲೈನ್ ತರಗತಿಗಳನ್ನು ಮಾತ್ರ ನಡೆಸಲು ಸಾಧ್ಯ. ಆನ್‌ಲೈನ್ ತರಗತಿಗೆ ತಾಂತ್ರಿಕ ದೋಷವೂ ಎದುರಾಗುತ್ತಿರುತ್ತದೆ ಎಂದು ಬೆಂವಿವಿ ಮೂಲಗಳು ತಿಳಿಸಿವೆ.
ಕೋವಿಡ್ ವ್ಯಾಪಕತೆಯ ಜತೆಗೆ ಶೈಕ್ಷಣಿಕ ವರ್ಷವಿಳಂಬವಾಗಿ ಆರಂಭವಾಗುತ್ತಿರುವುದರಿಂದಈ ವರ್ಷ ಪ್ರವೇಶ ಪರೀಕ್ಷೆ ಮಾಡದೇ ಇರಲು ಚಿಂತನೆ ನಡೆಸಿದ್ದೇವೆ. ನವೆಂಬರ್ 15ರ ತನಕ ಪ್ರಥಮ ಸೆಮಿಸ್ಟರ್ ಸ್ನಾತಕೋತ್ತರ ಕೋರ್ಸ್‌ಗಳು ಆರಂಭವಾಗಬಹುದು. -ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಪತಿಬೆಂವಿವಿ
ರಾಜುಖಾರ್ವಿ ಕೊಡೇರಿ