Advertisement

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

11:05 AM Jan 07, 2025 | Team Udayavani |

ಬೆಂಗಳೂರು: ಪೊಲೀಸ್‌ ಇಲಾಖೆಗೆ ನಕಲಿ ದಾಖಲೆಗಳನ್ನು ನೀಡಿದ ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಠಾಣೆ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಕಾಶಿಲಿಂಗೇಗೌಡರನ್ನು ಅಮಾನತು ಮಾಡಿ, ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್‌ ಆದೇಶ ಹೊರಡಿಸಿದ್ದಾರೆ.

Advertisement

ನಕಲಿ ದಾಖಲೆ ನೀಡಿದ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಡಿ.24 ರಂದು ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಕಾಶಿಲಿಂಗೇಗೌಡ ಜಾಮೀನು ಪಡೆದುಕೊಂಡಿದ್ದರು. ನಂತರ ಪೊಲೀಸ್‌ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದೀಗ ಪಿಎಸ್‌ಐ ಅನ್ನು ಅಮಾನತು ಮಾಡಲಾಗಿದೆ.

ನಕಲಿ ಜನ್ಮ ದಿನಾಂಕ ಹೊಂದಿರುವ ದಾಖಲೆಯನ್ನು ನೀಡಿ ಕೆಲಸ ಪಡೆದುಕೊಂಡ ಆರೋಪದಡಿ ಕಾಶಿಲಿಂಗೇಗೌಡ ವಿರುದ್ಧ ಬೆಂಗಳೂರು ಪೊಲೀಸ್‌ ಇಲಾಖೆಯ ಆಡಳಿತ ವಿಭಾಗದ ಅಧಿಕಾರಿ ಎಸ್‌. ಟಿ.ಚಂದ್ರಶೇಖರ್‌ ನೀಡಿದ್ದ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಲಾಗಿತ್ತು. ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ವಯಸ್ಸು 30 ವರ್ಷ ಮೀರಿರಬಾರದೆಂದು ಸರ್ಕಾರದ ನಿಯಮ ಇದೆ. ಹೀಗಿರುವಾಗ ಅರ್ಹ ಅಭ್ಯರ್ಥಿ ಅಲ್ಲದಿದ್ದರು ಕೂಡ ಕಾಶಿಲಿಂಗೇಗೌಡ ತಮ್ಮ ಜನ್ಮ ದಿನಾಂಕವನ್ನು 1987 ಏಪ್ರಿಲ್‌ 15 ಎಂಬುದಾಗಿ ಇದ್ದ ಜನ್ಮದಿನಾಂಕವನ್ನು 1988 ಏಪ್ರಿಲ್ 15 ಎಂದು ನೀಡುವ ಮೂಲಕ 2017-18ರ ಸಾಲಿನ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಿ, ಉತ್ತೀರ್ಣಗೊಂಡು ನೇಮಕವಾಗಿದ್ದಾರೆ ಎಂದು ಚಂದ್ರಶೇಖರ್‌ ದೂರಿನಲ್ಲಿ ಉಲ್ಲೇಖೀಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next