Advertisement

ಮೋದಿ ಪ್ರಧಾನಿಯಾಗಿರುವವರೆಗೂ ರೈತರ ಜಮೀನು ಸುರಕ್ಷಿತ: ಅಮಿತ್ ಶಾ

05:11 PM Dec 25, 2020 | Adarsha |

ನವದೆಹಲಿ: ನರೇದ್ರ ಮೋದಿ ಅವರು ಪ್ರಧಾನಿಯಾಗಿರುವವರೆಗೂ ಯಾವುದೇ ಕಾರ್ಪೋರೇಟ್ ಕಂಪನಿಗಳಿಗೆ ರೈತರ ಜಮೀನನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

Advertisement

ಕಿಸಾನ್ ಗಡ ಗ್ರಾಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ನೂತನ ಕೃಷಿ ಕಾಯ್ದೆಗಳು ರೈತರ ಹಿತದೃಷ್ಟಿಯಿಂದಲೇ ರೂಪಿಸಲಾಗಿದ್ದು, ಅವುಗಳು ರೈತ ವಿರೋಧಿ ಎಂಬ ಅನುಮಾನಗಳಿದ್ದರೆ ಆ ಎಲ್ಲಾ  ವಿಧವಾದ ಅನುಮಾನಗಳನ್ನು ತೆರೆದ ಮನಸ್ಸಿನಿಂದ ರೈತರ ಜೊತೆ ಚರ್ಚಿಸಿ ಬಗೆಹರಿಸಲು ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದು ಹೇಳಿದರು.

ನೂತನವಾದ ಈ ಕಾಯ್ದೆಗಳನ್ನು ಜಾರಿಗೆ ತರುವುದರಿಂದ ರೈತರಿಗೆ ಯಾವುದೇ ವಿಧವಾದ ಸಮಸ್ಯೆಗಳು ಆಗುವುದಿಲ್ಲ, ಜೊತೆಗೆ ರೈತರ ಕೃಷಿ ಬೆಂಬಲ ಬೆಲೆಯಲ್ಲಿಯೂ ಯಾವುದೇ ಬದಲಾವಣೆಗಳು ಆಗುವುದಿಲ್ಲ ಎಂದರು.

ಇದನ್ನೂ ಓದಿ:ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ: ಆರು ರಾಜ್ಯದ ಕೃಷಿಕರ ಜೊತೆ ಮೋದಿ ಸಂವಾದ

ಬೆಂಬಲ ಬೆಲೆಯನ್ನು ಒಳಗೊಂಡಂತೆ ನೂತನ ಕೃಷಿ ಕಾಯ್ದೆಯಲ್ಲಿ ಇರುವ  ಅಂಶಗಳ ಕುರಿತಾಗಿ ವಿರೋಧ ಪಕ್ಷಗಳು ರೈತರಿಗೆ ತಪ್ಪು ಮಾಹಿತಿ ನೀಡುತ್ತಿವೆ. ರೈತರನ್ನು ಅಭಿವೃದ್ಧಿಯ ಕಡೆ ಕೊಂಡೊಯ್ಯುವುದೇ ಮೋದಿ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ನುಡಿದರು.

Advertisement

ಇದನ್ನೂ ಓದಿ:ಚರ್ಚ್‌ಗಳಲ್ಲಿ ಸರಳ ಆಚರಣೆ, ಮನೆಗಳಲ್ಲಿ ಸಂಭ್ರಮ

ಈ ಸಂದರ್ಭದಲ್ಲಿ ಕಿಸಾನ್ ಸಮ್ಮಾನ್ ನಿಧಿಯಡಿ ವಿವಿಧ ರಾಜ್ಯದ ರೈತರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದನ್ನು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next