Advertisement

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

01:06 PM Dec 19, 2024 | Team Udayavani |

ರಾಜಸ್ಥಾನ: ಜಮೀನು ವಿವಾದಕ್ಕೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ಸೋದರಳಿಯ ತನ್ನ ಚಿಕ್ಕಮ್ಮನ ಮೂಗನ್ನೇ ಕತ್ತರಿಸಿದ ಘಟನೆಯೊಂದು ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಜಲೋರ್​ನ ಸೈಲಾ ಮೂಲದ ಕುಕಿ ದೇವಿ ಎನ್ನಲಾಗಿದೆ.

Advertisement

ಏನಿದು ಪ್ರಕರಣ:
ಕುಕಿ ದೇವಿ ಕೆಲವು ದಿನಗಳಿಂದ ರಾಜಸ್ಥಾನದ ಸೈಲಾ ಗ್ರಾಮದ ಮೋಕ್ನಿ ಎಂಬಲ್ಲಿ ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ ಈ ನಡುವೆ ತಾಯಿಗೆ ಸೇರಿದ ಜಮೀನಿನ ವಿಚಾರವಾಗಿ ಸಂಬಂಧಿಕರ ನಡುವೆ ಆಗಾಗ ಜಗಳಗಳು ನಡೆಯುತಿತ್ತು ಎನ್ನಲಾಗಿದೆ, ಈ ನಿಟ್ಟಿನಲ್ಲಿ ಕಳೆದ ಮಂಗಳವಾರ(ಡಿ.17) ಕುಕಿ ದೇವಿ ತನ್ನ ಸಹೋದರ ರಮೇಶ್ ಜೊತೆ ಸೇರಿ ಜಮೀನಿನ ವಿವಾದವನ್ನು ಬಗೆಹರಿಸಿ ಬರೋಣ ಎಂದು ಮೊಕನಿ ಗ್ರಾಮಕ್ಕೆ ತೆರಳಿದ್ದರು, ಈ ವೇಳೆ ಅಲ್ಲಿಗೆ ಬಂದ ಸೋದರಳಿಯ ಓಂ ಪ್ರಕಾಶ್ ಹಾಗೂ ಸಂಬಂಧಿಕರು ಕುಕಿ ದೇವಿಯ ಬಳಿ ಗಲಾಟೆ ಶುರು ಮಾಡಿದ್ದಾರೆ ಈ ವೇಳೆ ಮಾತಿಗೆ ಮಾತು ಬೆಳೆದು ಗಂಭೀರ ಹಂತಕ್ಕೆ ತಲುಪಿ ಓಂ ಪ್ರಕಾಶ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಕುಕಿ ದೇವಿಯ ಮೂಗನ್ನು ಕತ್ತರಿಸಿದ್ದಾನೆ, ಈ ವೇಳೆ ಮೂಗಿನ ಭಾಗ ತುಂಡಾಗಿ ನೆಲಕ್ಕೆ ಬಿದ್ದಿದ್ದು ರಕ್ತ ಹರಿಯತೊಡಗಿದೆ, ಕೂಡಲೇ ಕುಕಿ ದೇವಿ ತುಂಡಾದ ಮೂಗನ್ನು ಹೆಕ್ಕಿ ತನ್ನ ಬ್ಯಾಗ್ ಒಳಗೆ ಇಟ್ಟು ಪಾಲಿಯಲ್ಲಿರುವ ಬಂಗಾರ್ ಆಸ್ಪತ್ರೆಗೆ ಓಡೋಡಿ ಬಂದಿದ್ದಾಳೆ.

ಆಸ್ಪತ್ರೆಗೆ ಬಂದ ಕೂಡಲೇ ಪರಿಶೀಲಿಸಿದ ವೈದ್ಯರಿಗೆ ತನ್ನ ಬ್ಯಾಗಿನ ಒಳಗಿಂದ ಮೂಗನ್ನು ತೆಗೆದು ತೋರಿಸಿದ್ದಾರೆ ಇದನ್ನು ಕಂಡ ಬಂಗಾರ್ ಆಸ್ಪತ್ರೆಯ ಡಾ.ಜುಗಲ್ ಮಹೇಶ್ವರಿ ಒಮ್ಮೆ ಗಾಬರಿಯಾಗಿದ್ದಾರೆ. ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಮೂಗು ತೀವ್ರವಾಗಿ ಕತ್ತರಿಸಲ್ಪಟ್ಟಿದೆ ಮತ್ತು ಪ್ಲಾಸ್ಟಿಕ್ ಸರ್ಜರಿ ಮೂಲಕ ಮಾತ್ರ ಅದನ್ನು ಮರು ಜೋಡಿಸಲು ಸಾಧ್ಯ ಎಂದು ಹೇಳಿ ಜೋಧ್‌ಪುರದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ, ಸದ್ಯ ಕುಕಿ ದೇವಿಗೆ ಜೋಧ್‌ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾಳೆ.

ಆರೋಪಿಗಳ ಬಂಧನ:
ಇನ್ನು ಜಮೀನು ವಿಚಾರವಾಗಿ ಕುಕಿ ದೇವಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸೋದರಳಿಯ ಓಂ ಪ್ರಕಾಶ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ,

ಇದನ್ನೂ ಓದಿ: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next