Advertisement
ಬನ್ನೇರುಘಟ್ಟ ಬಯೋಲಾಜಿ ಕಲ್ ಪಾರ್ಕ್ 2020-21ರಲ್ಲಿ ಅತಿ ಹೆಚ್ಚು ನಷ್ಟ ಹೊಂದಿತ್ತು, 2022-23ನೇ ಸಾಲಿನಲ್ಲಿ 53 ಕೋಟಿ ರೂ.ಸಂಗ್ರಹ ಮಾಡುವ ಮೂಲಕ ಮತ್ತೆ ಚೇತರಿಸಿದೆ. ಕಳೆದೆರಡು ವರ್ಷ ಪ್ರಾಣಿಗಳಿಗೆ ಊಟ ಉಪಚಾರಕ್ಕೂ ಕಷ್ಟ ಅನುಭವಿಸಿದ್ದ ಪಾರ್ಕ್ ಆಗ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಪ್ರಾಣಿ ಪ್ರಿಯರಲ್ಲಿ ಮನವಿ ಮಾಡಿತ್ತು. ಆದರೆ, ಈಗ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ತನ್ನ ಆದಾಯ ಮೂಲ ವೃದ್ಧಿಸಿಕೊಂಡಿದೆ. ಕೊರೊನಾ ಬಳಿಕ ಅಂದರೆ 2022-23ನೇ ವರ್ಷದಲ್ಲಿ 2 ಲಕ್ಷ, 22 ಸಾವಿರದ 993 ಪ್ರವಾಸಿಗರು ಭೇಟಿ ಕೊಟ್ಟಿದ್ದು, 53 ಕೋಟಿ 89 ಲಕ್ಷ 75 ಸಾವಿರದಷ್ಟು ಹಣ ಸಂಗ್ರಹ ಆಗಿದೆ.