Advertisement
ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯ ಟ್ರಾಂಚ್-3ರಲ್ಲಿ ದೇಶದ ವಿವಿಧ ರಾಜ್ಯದಲ್ಲಿ ಜಲಮೂಲಗಳ ಪುನಶ್ಚೇತನ ಹಾಗೂ ಹಸುರು ಜಾಗ ಹಾಗೂ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳಿಗೆ ಇತ್ತೀಚೆಗೆ ನಡೆದ ಕೇಂದ್ರದ ಅಪೆಕ್ಸ್ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರನ್ವಯ ರಾಜ್ಯದ 90 ನಗರ ಸ್ಥಳೀಯ ಸಂಸ್ಥೆಗಳಲ್ಲಿ 203 ಜಲಮೂಲಗಳ ಪುನಶ್ಚೇತನ, 254 ಹಸುರು ಜಾಗ ಹಾಗೂ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಒಟ್ಟು 684 ಕೋ.ರೂ ಮೊತ್ತಕ್ಕೆ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ 26.95 ಕೋ.ರೂ ಮಂಗಳೂರಿಗೆ ಲಭಿಸಿದೆ.
Related Articles
Advertisement
ಮಂಗಳೂರಿನ ಕದ್ರಿ ಪಾರ್ಕ್ ಸಹಿತ ವಿವಿಧ ಪಾರ್ಕ್ಗಳು, ಕೆರೆಗಳು ಅಭಿವೃದ್ಧಿ ಎಂಬ ವಿಚಾರದಲ್ಲಿ ಘೋಷಣೆ-ಹೇಳಿಕೆಗಳು ನಿಯಮಿತವಾಗಿ ಕೇಳಿಬರುತ್ತವೆ. ಆದರೆ, ಯಾವುದೂ ಕೂಡ ಪೂರ್ಣ ರೀತಿಯಲ್ಲಿ ಕೈಗೂಡುವುದಿಲ್ಲ ಎಂಬುದು ಸಾರ್ವತ್ರಿಕ ಆರೋಪ. ಗುಜ್ಜರಕೆರೆ ಅಭಿವೃದ್ಧಿ ಆದರೂ ಅಲ್ಲಿಗೆ ಒಳ ಚರಂಡಿ ನೀರು ಸೇರುವುದು ನಿಂತಿಲ್ಲ. ಹೀಗಾಗಿ ಅಭಿವೃದ್ಧಿ ಕಾಟಾಚಾರ ವಾಗಬಾರದು ಎನ್ನುವುದು ಸಾರ್ವಜನಿಕರ ಕಾಳಜಿ. ಭವಿಷ್ಯದ ಮಂಗಳೂರಿಗೆ ಅನುಕೂಲ
ಭವಿಷ್ಯದ ಮಂಗಳೂರಿನ ಪರಿಸರ ಸಂರಕ್ಷಣೆ ಹಾಗೂ ಸುಂದರೀಕರಣದ ನೆಲೆಯಲ್ಲಿ ಈ ಯೋಜನೆ ಮಹತ್ವ ಪಡೆಯಲಿದೆ. ಪಾಲಿಕೆಯಲ್ಲಿ ಇದಕ್ಕೆ ಅನುಮೋದನೆ ಪಡೆದು ಮುಂದೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
-ಡಿ. ವೇದವ್ಯಾಸ ಕಾಮತ್, ಶಾಸಕರು ಉದ್ದೇಶಿತ ಕಾಮಗಾರಿ, ಅಂದಾಜು ವೆಚ್ಚ
1. ಜೋಗಿಮಠ ಸಮೀಪದ ಕೆರೆ: 2.40 ಕೋಟಿ ರೂ.
2. ಪಾಂಡೇಶ್ವರ ಪೈ ಸೇಲ್ಸ್ ಹಿಂದಿನ ಪಾರ್ಕ್: 55 ಲಕ್ಷ ರೂ.
3. ಕೋಡಿಕಲ್ ಕಲ್ಲಕಂಡ ಪಾರ್ಕ್: 2.20 ಕೋಟಿ ರೂ.
4. ಕದ್ರಿ ಪಾರ್ಕ್ ಅಭಿವೃದ್ಧಿ: 2.75 ಕೋಟಿ ರೂ.
5. ಪಡೀಲ್ ಬೈರಾಡಿ ಕೆರೆ: 1.35 ಕೋಟಿ ರೂ.
6. ಕುಳಾಯಿ ಬಗ್ಗುಂಡಿ ಕೆರೆ: 14.00 ಕೋಟಿ ರೂ
7. ಕಡೇಕಾರ್ ಮಲ್ಲಿಕಾರ್ಜುನ ಕೆರೆ: 3.70 ಕೋಟಿ ರೂ. -ದಿನೇಶ್ ಇರಾ