Advertisement

ವಿವಿಧ ಕ್ಷೇತ್ರಗಳಲ್ಲಿ  ಗಮನ ಸೆಳೆಯುತ್ತಿರುವ ನಿರೀಕ್ಷಾ  ಶೆಟ್ಟಿ

02:43 PM Aug 01, 2017 | |

ಮುಂಬಯಿ: ಚೀನದ ಬೀಜಿಂಗ್‌ನಲ್ಲಿ ಜು. 23 ರಿಂದ ಜು. 28ರ ವರೆಗೆ ನಡೆದ ಬ್ರೆಜಿಲ…, ರಷ್ಯಾ, ಇಂಡಿಯಾ, ಚೀನ, ದಕ್ಷಿಣ ಆಫ್ರಿಕಾ ದೇಶಗಳ ಯುವ ಪ್ರತಿನಿಧಿಗಳು ಭಾಗವಹಿಸುವ ಪ್ರತಿಷ್ಠಿತ ಬ್ರಿಕ್ಸ್‌  ಸಮ್ಮೇಳನದಲ್ಲಿ ಭಾರತ ಸರಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಾಯೋಜಿಸಿರುವ ಭಾರತ ತಂಡದ ಹತ್ತು ಮಂದಿಯಲ್ಲಿ ನಿರೀಕ್ಷಾ ಶೆಟ್ಟಿ ಅವರು ಸ್ಥಾನ ಪಡೆದು ತನ್ನ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ.

Advertisement

ಕರ್ನಾಟಕದ ಏಕೈಕ  ಸ್ವಯಂ ಸೇವಕಿಯಾಗಿ ಆಯ್ಕೆಯಾಗಿರುವ ಇವರು, ತನ್ನ ಅವಿರತ ಪರಿಶ್ರಮ, ದೃಢತೆ, ಆತ್ಮವಿಶ್ವಾಸದಿಂದ ಕ್ರೀಡೆ, ಮಾಡೆಲಿಂಗ್‌, ನೃತ್ಯ, ರಾಷ್ಟ್ರೀಯ ಸೇವಾ ಯೋಜನೆ ಹೀಗೆ ಬಹುಮುಖೀ ಸಾಧಕಿಯಾಗಿ ತನ್ನ ಪ್ರತಿಭಾ ಪ್ರದರ್ಶನದಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.  ಹತ್ತನೆ ತರಗತಿಯಲ್ಲಿರುವಾಗಲೆ ಮಹಾ ರಾಷ್ಟ್ರ ರಾಜ್ಯ ಹಾಕಿ ತಂಡವನ್ನು ಪ್ರತಿನಿಧಿಸಿರುವ ಇವರು ಉತ್ತಮ ಕ್ರೀಡಾಪಟುವಾಗಿಯೂ ಗಮನ ಸೆಳೆದಿದ್ದಾರೆ. 2015ರಲ್ಲಿ ಪುತ್ತೂರಿನಲ್ಲಿ ನಡೆದ ‘PRINCESS OF PEARL CITY’  ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ಇವರು, 2016 ರಲ್ಲಿ ಮೈಸೂರಿನಲ್ಲಿ ನಡೆದ  ‘MISS KARNATAKA’ ಸೌಂದರ್ಯ ಸ್ಪರ್ಧೆಯಲ್ಲಿ ಚತುರ್ಥ ಸ್ಥಾನ, 2017 ರಲ್ಲಿ ನಡೆದ  ಇಂಟರ್‌ ನ್ಯಾಷನಲ್‌ ಬಂಟ್ಸ್‌ ವೆಲ್ಫೆàರ್‌ ಟ್ರಸ್ಟ್‌ನ  MISS BUNT-2017’ ಸ್ಪರ್ಧೆಯಲ್ಲಿ BEST BUNT PERSONALITY AWARD’, 2017ರಲ್ಲಿ ಪುತ್ತೂರಿನ ಬಂಟರ ಸಂಘ ಆಯೋಜಿಸಿದ್ದ  ‘MISS BUNT-2017’ ಸೌಂದರ್ಯ ಸ್ಪರ್ಧೆಯಲ್ಲಿ ‘MISS BUNT’ ಕಿರೀಟವನ್ನು ಮುಡಿಗೇರಿಸಿ ಕೊಂಡಿದ್ದಾರೆ.

ನಿರೀûಾ ಶೆಟ್ಟಿ ಓರ್ವ ಅಪ್ರತಿಮ ನೃತ್ಯ ಪಟುವಾಗಿದ್ದು ಮೈಸೂರಿನ ಯುವ ದಸರಾ ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಅಲ್ಲದೆ ಅನೇಕ ಶಾಸ್ತ್ರೀಯ, ಜಾನಪದ, ಫಿಲಿ¾ ನೃತ್ಯದ ಮೂಲಕ ಕರ್ನಾಟಕ, ಮಹಾರಾಷ್ಟ್ರ  ರಾಜ್ಯಾದ್ಯಂತ ಹಲವಾರು ಪ್ರಶಸ್ತಿ, ಬಹುಮಾನಗಳಿಗೆ ಪಾತ್ರರಾಗಿದ್ದಾರೆ.  ರಾಷ್ಟ್ರೀಯ ಸೇವಾ ಯೋಜನೆಯ  ಸ್ವಯಂ ಸೇವಕಿಯಾಗಿರುವ ನಿರೀûಾ ಶೆಟ್ಟಿ ಕಳೆದ ಗಣರಾಜ್ಯ ಉತ್ಸವ ಸಂಧರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಮಿ ಪರೇಡ್‌ನೊಂದಿಗೆ ಧ್ವಜವಂದನೆ ಸಲ್ಲಿಸಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂದಿನ  ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಉಪಸ್ಥಿತಿಯಲ್ಲಿ, ಪಟ್ಲಗುತ್ತು ಸತೀಶ್‌  ಶೆಟ್ಟಿ ಹಾಡಿರುವ “ಮಾಯಕಡೊಂಜಿ ಪೊಣ್ಣ ಗಾಳಿ ಬೀಜಿಂಡ್‌ಗೆ’  ಹಾಡಿಗೆ ಯಕ್ಷಗಾನ ಶೈಲಿಯ ನಾಟ್ಯ ಪ್ರದರ್ಶನ ನೀಡಿ ಕರಾವಳಿಯ ಕಲಾ  ಪ್ರೌಢಿಮೆಯ ಅನಾವರಣಗೈದಿದ್ದು ನಿಜವಾಗಿಯೂ ಶ್ಲಾಘನೀಯ. 

ಇವರು ಮೂಲತಃ ಅರ್ಕುಳ ದೇವಸ್ಯ ಚಿತ್ತರಂಜನ್‌ ಶೆಟ್ಟಿ ಮತ್ತು ಕಿನ್ನಿಗೋಳಿ ಅಡ್ರಗುತ್ತು ಸುಜಾತಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು, ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ನ ಕಂಪ್ಯೂಟರ್‌ ಸಾಯನ್ಸ್‌ ವಿಭಾಗದ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next