ವೆಲ್ಲಿಂಗ್ಟನ್: ಬ್ಯಾಟಿಂಗ್ ಆಲ್‌ರೌಂಡರ್ ಮೈಕಲ್ ಬ್ರೇಸ್‌ವೆಲ್ ಮೊದಲ ಸಲ ನ್ಯೂಜಿಲ್ಯಾಂಡ್ ಟೆಸ್ಟ್ ತಂಡಕ್ಕೆ ಕರೆ ಪಡೆದಿದ್ದಾರೆ. ಹಾಗೆಯೇ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಮರಳಿದ್ದಾರೆ.
3 ಪಂದ್ಯಗಳ ಸರಣಿಗಾಗಿ ನ್ಯೂಜಿಲ್ಯಾಂಡ್ ತಂಡ ಇಂಗ್ಲೆಂಡ್ ಪ್ರವಾಸಗೈಯಲಿದೆ.
ಬ್ರೇಸ್‌ವೆಲ್ ಈಗಾಗಲೇ 3 ಏಕದಿನ ಪಂದ್ಯಗಳನ್ನಾಡಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಆಯ್ಕೆಯಾಗಿದ್ದ ವಿಕೆಟ್ ಕೀಪರ್ ಬ್ಯಾಟರ್ ಕ್ಯಾಮರಾನ್ ಫ್ಲೆಚರ್ ಮತ್ತು ಪೇಸ್ ಬೌಲರ್ ಬ್ಲೇರ್ ಟಿಕ್ನರ್ ಕೂಡ ಈ ತಂಡದಲ್ಲಿದ್ದಾರೆ.
ಇಂಗ್ಲೆಂಡ್-ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿ ಜೂ. 2ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ. 2ನೇ ಟೆಸ್ಟ್ ಟ್ರೆಂಟ್ ಬ್ರಿಜ್ (ಜೂ. 10-14) ಮತ್ತು 3ನೇ ಟೆಸ್ಟ್ ಹೇಡಿಂಗ್ಲೆಯಲ್ಲಿ (ಜೂ. 23-27) ನಡೆಯಲಿದೆ.
ನ್ಯೂಜಿಲ್ಯಾಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಿಂಡೆಲ್, ಟ್ರೆಂಟ್ ಬೌಲ್ಟ್, ಮೈಕಲ್ ಬ್ರೇಸ್‌ವೆಲ್, ಡೇವನ್ ಕಾನ್ವೆ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಜೇಕಬ್ ಡಫಿ, ಕ್ಯಾಮರಾನ್ ಫ್ಲೆಚರ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಂ, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ರಚಿನ್ ರವೀಂದ್ರ, ಹಾಮಿಷ್ ರುದರ್‌ಫೋರ್ಡ್, ಟಿಮ್ ಸೌಥಿ, ಬ್ಲೇರ್ ಟಿಕ್ನರ್, ನೀಲ್ ವ್ಯಾಗ್ನರ್, ವಿಲ್ ಯಂಗ್.